ಮುಂಬೈ: ಕೋವಿಡ್ ನಿಂದ ತೊಂದರೆಗೀಡಾಗಿರುವ ಸೆಕ್ಸ್ ವರ್ಕರ್ ಗಳಿಗೆ ಮಹಾರಾಷ್ಟ್ರ ಸರ್ಕಾರ ಕೊಡುಗೆ ನೀಡಲು ಮುಂದಾಗಿದೆ. ಮೂರು ತಿಂಗಳು ಮಾಸಾಶನ ನೀಡುವುದಾಗಿ ಘೋಷಿಸಿದೆ.
ರಾಜ್ಯದ 32 ಜಿಲ್ಲೆಗಳ 30 ಸಾವಿರ ಮಹಿಳೆಯರಿಗೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿಗೆ ಅನ್ವಯವಾಗುವಂತೆ ತಲಾ 5 ಸಾವಿರ ನೀಡುವುದಾಗಿ ತಿಳಿಸಿದೆ. ಶಾಲೆಗೆ ಹೋಗುವ ಮಕ್ಕಳಿದ್ದವರಿಗೆ ಇನ್ನೂ 2,500 ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಿದೆ. ಇದಕ್ಕಾಗಿ ಸರ್ಕಾರ 51 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ಕೋವಿಡ್ 19 ಪರಿಹಾರವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 30,901 ಮಹಿಳೆಯರಿಗೆ ಪರಿಹಾರಧನ ನೀಡಲು ಸರ್ಕಾರ ಗುರುವಾರ ನಿರ್ಣಯ ಕೈಗೊಂಡಿದೆ. ಗುರುತಿನ ಚೀಟಿ ಪಡೆದು ಪರಿಹಾರ ವಿತರಣೆಗೆ ವ್ಯವಸ್ಥೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಶೋಮತಿ ಠಾಕೂರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.