ಮಹಾರಾಷ್ಟ್ರದ ನಾಂದೇಡ್ನ ಸರ್ಕಾರಿ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿಯ ಬಳಿ ಕಚೇರಿಯ ಪಾರ್ಕಿಂಗ್ ಏರಿಯಾದಲ್ಲಿ ಕುದುರೆಯನ್ನ ನಿಲ್ಲಿಸೋಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಈ ಅಧಿಕಾರಿಯ ಬೆನ್ನು ಮೂಳೆಯಲ್ಲಿ ಸಮಸ್ಯೆಯಿರೋದ್ರಿಂದ ದ್ವಿಚಕ್ರ ವಾಹನದ ಮೇಲೆ ಪ್ರಯಾಣ ಮಾಡೋದು ಕಷ್ಟವಾಗಿದೆ.
ಹೀಗಾಗಿ ಕುದುರೆಯಲ್ಲೇ ಕಚೇರಿಗೆ ಬರಬೇಕು ಎಂದುಕೊಂಡಿರುವ ನನಗೆ ಇದನ್ನ ಪಾರ್ಕ್ ಮಾಡೋಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ನಾಂದೇಡ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ಖಾತರಿ ಯೋಜನೆ ವಿಭಾಗದಲ್ಲಿ ಸಹಾಯಕ ಲೆಕ್ಕ ಪರಿಶೋಧಕರಾಗಿರುವ ಸತೀಶ್ ದೇಶಮುಖ್ ಇಂತಹದ್ದೊಂದು ವಿಚಿತ್ರ ಮನವಿಯನ್ನ ಜಿಲ್ಲಾಧಿಕಾರಿಗಳ ಮುಂದಿಟ್ಟಿದ್ದಾರೆ.
ಸತೀಶ್ ದೇಶಮುಖ್ರ ಮನವಿ ಸ್ವೀಕರಿಸಿದ ಉಪ ಸಂಗ್ರಾಹಕ ಪ್ರದೀಪ್ ಕುಲಕರ್ಣಿ, ಈ ವಿಚಾರವಾಗಿ ಮೂಳೆ ತಜ್ಞರ ಬಳಿ ವೈದ್ಯಕೀಯ ಸಲಹೆಯನ್ನ ಕೇಳಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಆಗಿರುವ ಡಾ. ಶಂಕರ್ರಾವ್ ಚವಾಣ್ ದೇಶ್ಮುಖ್ ಕುದುರೆ ಸವಾರಿ ಮಾಡಿದ್ರೆ ಬೆನ್ನು ಮೂಳೆ ಸಮಸ್ಯೆ ಮತ್ತಷ್ಟು ಉಲ್ಬಣವಾಗಬಹುದು ಎಂದು ಹೇಳಿದ್ದಾರೆ.
ನನಗೆ ಬೆನ್ನುಹುರಿಯಲ್ಲಿ ಕೆಲ ಸಮಸ್ಯೆ ಇದೆ. ಹೀಗಾಗಿ ನನಗೆ ದ್ವಿಚಕ್ರವಾಹನದ ಮೂಲಕ ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾನೊಂದು ಕುದುರೆಯನ್ನ ಖರೀದಿಸಿ ಅದರ ಮೇಲೆಯೇ ಆಫೀಸ್ಗೆ ಬರಬೇಕು ಎಂದುಕೊಂಡಿದ್ದೇನೆ. ಹೀಗಾಗಿ ತಾವು ಕುದುರೆಯನ್ನ ಕಟ್ಟಲು ಅವಕಾಶ ನೀಡಿ ಎಂದು ಅರ್ಜಿಯಲ್ಲಿ ಬರೆದಿದ್ದರು. ಸಂಜೆ ಈ ಪತ್ರವನ್ನ ಸತೀಶ್ ವಾಪಸ್ ಪಡೆದದ್ದು ಮಾತ್ರವಲ್ಲದೇ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿದ್ದಾರೆ.