alex Certify ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಫೋಟೋ

ಮುಂಬೈ: ನವಜಾತ ಶಿಶುವನ್ನು ಒಂದೆರಡು ತಾಸಿನಲ್ಲೇ ಅಮ್ಮನೊಟ್ಟಿಗೆ ಬಿಡುವುದು ಆಸ್ಪತ್ರೆಗಳು ಅನುಸರಿಸುವ ಕ್ರಮ. ಆದರೆ, ಈ ಅಮ್ಮನಿಗೆ ಆ ಭಾಗ್ಯವಿಲ್ಲ. ಅದಕ್ಕೆ ಕರೋನಾ ಕಾರಣ.

ಔರಂಗಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಏ.18 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಕರೋನಾ ಸೋಂಕಿತ ತಾಯಿಯಿಂದ ಮಗುವನ್ನು ಬೇರ್ಪಡಿಸಿ ಬೇರೆ ವಾರ್ಡ್ ನಲ್ಲಿ ಇಡಲಾಗಿತ್ತು.

ಮಗುವನ್ನು ಹತ್ತಿರದಿಂದ ನೋಡಲು ಇಚ್ಛೆ ಪಟ್ಟ ತಾಯಿಗೆ ವಿಡಿಯೋ ಕಾಲ್ ಮೂಲಕ‌ ತನ್ನ ಮಗುವನ್ನು ನೋಡಲು ಅವಕಾಶ ಮಾಡಿಕೊಡಲಾಯಿತು.

ಆ ಹೃದಯಸ್ಪರ್ಶಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆದ ಒಂದೇ ತಾಸಿನಲ್ಲಿ 1300 ಲೈಕ್ ಹಾಗೂ ನೂರಾರು ಕಮೆಂಟ್ ಗಳನ್ನು ಪಡೆದಿದೆ.

“ತನ್ನ ಮಗುವನ್ನು ಎತ್ತಿಕೊಳ್ಳಲಾಗದ ತಾಯಿಯ ಪರಿಸ್ಥಿತಿಯನ್ನು‌ ಕಲ್ಪನೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು “ತಾಯಿ ಶೀಘ್ರ ಗುಣಮುಖವಾಗಿ ಮಗುವನ್ನು ಎತ್ತಿಕೊಳ್ಳುವಂತಾಗಲಿ” ಎಂದು ಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...