alex Certify ಎಂದೂ ಆರದ ಮಣ್ಣಿನ ದೀಪವನ್ನ ನೋಡಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂದೂ ಆರದ ಮಣ್ಣಿನ ದೀಪವನ್ನ ನೋಡಿದ್ದೀರಾ…?

ಅಶೋಕ್​ ಚಕ್ರಧರಿ ಎಂಬ ವ್ಯಕ್ತಿ ವಿಶೇಷವಾದ ಮಣ್ಣಿನ ದೀಪವನ್ನ ವಿನ್ಯಾಸಗೊಳಿಸಿದ್ದು ಈ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಆಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಈ ದೀಪವನ್ನ ನಿರ್ಮಿಸಲಾಗಿದ್ದು ಇಡೀ ದಿನ ದೀಪ ಆರದೇ ಉರಿಯುತ್ತದೆ.

ಚತ್ತೀಸಗಢದ ಕೊಂಡಗಾವ್ ಗ್ರಾಮದ ನಿವಾಸಿ ಅಶೋಕ್​ ಯೂಟ್ಯೂಬ್​ನ ಸಹಾಯದಿಂದ ಈ ದೀಪ ತಯಾರಿಸಿದ್ದಾರೆ. ದೀಪದ ಮೇಲೆ ಎಣ್ಣೆಯನ್ನ ಸಂಗ್ರಹಿಸಲು ಪುಟಾಣಿ ಗುಮ್ಮಟ ಅಳವಡಿಸಲಾಗಿದ್ದು ಈ ಗುಮ್ಮಟದಿಂದ ದೀಪಕ್ಕೆ ಎಣ್ಣೆ ವರ್ಗಾವಣೆಯಾಗೋದ್ರಿಂದ ಬಹಳ ಸಮಯದವರೆಗೆ ದೀಪ ಉರೀತಾ ಇರುತ್ತೆ.

5 ದೀಪಗಳು ವಿಫಲವಾದ ಬಳಿಕ 6ನೇ ಬಾರಿಗೆ ದೀಪ ಯಶಸ್ವಿಯಾಗಿ ನಿರ್ಮಾಣವಾಗಿದೆ. ಮೊದಲೆಲ್ಲ ಗುಮ್ಮಟ ಭಾರವಾಗಿದ್ದರಿಂದ ದೀಪ ಉರುಳುತ್ತಿತ್ತು. ಬಳಿಕ ಎಲ್ಲ ದೋಷಗಳನ್ನು ಸರಿಪಡಿಸಿದ ಬಳಿಕ ಸುಂದರವಾದ ದೀಪ ನಿರ್ಮಾಣವಾಗಿದೆ. ಈ ಹಿಂದೆ ನೂರಾರು ದೀಪಗಳನ್ನ ಮಾರಾಟ ಮಾಡಿದ್ದ ಅಶೋಕ್​, ಸೋಶಿಯಲ್​ ಮೀಡಿಯಾದಲ್ಲಿ ದೀಪದ ವಿಡಿಯೋ ವೈರಲ್​ ಆಗ್ತಿದ್ದಂತೆ ಹೆಚ್ಚಿನ ಆರ್ಡರ್​ಗಳು ಬರುತ್ತಿವೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...