alex Certify ಫೆರಾರಿ ಮಂಚೂರಿ, ಮಿರ್ಚಿ ಜಿಲೇಬಿ ಬಳಿಕ ಇದೀಗ ಟ್ರೆಂಡ್ ಸೆಟ್​ ಮಾಡಿದ ಮ್ಯಾಗಿ ಲಡ್ಡು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆರಾರಿ ಮಂಚೂರಿ, ಮಿರ್ಚಿ ಜಿಲೇಬಿ ಬಳಿಕ ಇದೀಗ ಟ್ರೆಂಡ್ ಸೆಟ್​ ಮಾಡಿದ ಮ್ಯಾಗಿ ಲಡ್ಡು..!

ಕೊರೊನಾ ಸಾಂಕ್ರಾಮಿಕ ಬಂದಾಗಿನಿಂದ ಸೋಶಿಯಲ್​ ಮೀಡಿಯಾದಲ್ಲಿ ಚಿತ್ರ ವಿಚಿತ್ರ ತಿನಿಸುಗಳ ಹಾವಳಿ ಜೋರಾಗಿದೆ. ಈ ಬಾರಿ ಮ್ಯಾಗಿಯ ಸರದಿ.‌

ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ತಯಾರಾಗಬಲ್ಲ ಈ ಮ್ಯಾಗಿ ಬ್ಯಾಚುಲರ್ಸ್​ಗೆ ಹಾಟ್​ ಫೇವರಿಟ್​. 10 ನಿಮಿಷದೊಳಗಾಗಿ ಈ ಮ್ಯಾಗಿ ನಿಮ್ಮ ತಟ್ಟೆಯಲ್ಲಿ ತಿನ್ನಲು ರೆಡಿಯಿರುತ್ತದೆ. ಮ್ಯಾಗಿಗೆ ತರಕಾರಿಗಳನ್ನ, ಮೊಟ್ಟೆಯನ್ನ ಹಾಕಿ ಹೊಸ ಹೊಸ ಟೇಸ್ಟ್ ನೀಡಿರ್ತಿರಾ. ಆದರೆ ಎಂದದರೂ ಈ ಮ್ಯಾಗಿಯಿಂದ ಲಡ್ಡುವನ್ನ ತಯಾರಿಸಿದ್ದೀರಾ..?

ಮ್ಯಾಗಿ ಲಡ್ಡು ಈ ಶಬ್ದವನ್ನ ಕೇಳೋಕೆ ವಿಚಿತ್ರ ಎನಿಸುತ್ತಿರಬಹುದು ಅಲ್ಲವೇ..? ಸಿಹಿ ಹಾಗೂ ಮಸಾಲೆಯುಕ್ತ ಈ ಲಡ್ಡು ಇದೀಗ ಟ್ರೆಂಡ್​ನಲ್ಲಿದೆ. ಬೆಲ್ಲದ ಪುಡಿ, ಬೆಣ್ಣೆ, ಏಲಕ್ಕಿ ಪುಡಿಯನ್ನ ಬಾಣಲೆಯಲ್ಲಿ ಬಿಸಿ ಮಾಡಿ ಬಳಿಕ ಪುಡಿ ಮಾಡಿ ಮ್ಯಾಗಿ ನ್ಯೂಡಲ್ಸ್​ ನ್ನು ಇದಕ್ಕೆ ಹಾಕಲಾಗುತ್ತದೆ.

ಈ ಮಿಶ್ರಣದಿಂದ ಬಳಿಕ ಲಡ್ಡುವನ್ನ ತಯಾರಿಸಲಾಗಿದೆ. ಇದನ್ನ ಚಟ್ನಿ ಇಲ್ಲವೇ ಸಾಸ್​ ಜೊತೆ ಸರ್ವ್ ಮಾಡಬೇಕಂತೆ. ಈ ವಿಚಿತ್ರ ತಿನಿಸನ್ನ ನೀವು ಟ್ರೈ ಮಾಡ್ತೀರಾ..? ಆದರೆ ನೆಟ್ಟಿಗರಂತೂ ಈ ರೆಸಿಪಿ ಮೇಲೆ ಟ್ರೋಲ್​ ಮೇಲೆ ಟ್ರೋಲ್​ ಮಾಡ್ತಿದ್ದಾರೆ.

— Zenia Irani (@ZeniaIrani) April 14, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...