
ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ತಯಾರಾಗಬಲ್ಲ ಈ ಮ್ಯಾಗಿ ಬ್ಯಾಚುಲರ್ಸ್ಗೆ ಹಾಟ್ ಫೇವರಿಟ್. 10 ನಿಮಿಷದೊಳಗಾಗಿ ಈ ಮ್ಯಾಗಿ ನಿಮ್ಮ ತಟ್ಟೆಯಲ್ಲಿ ತಿನ್ನಲು ರೆಡಿಯಿರುತ್ತದೆ. ಮ್ಯಾಗಿಗೆ ತರಕಾರಿಗಳನ್ನ, ಮೊಟ್ಟೆಯನ್ನ ಹಾಕಿ ಹೊಸ ಹೊಸ ಟೇಸ್ಟ್ ನೀಡಿರ್ತಿರಾ. ಆದರೆ ಎಂದದರೂ ಈ ಮ್ಯಾಗಿಯಿಂದ ಲಡ್ಡುವನ್ನ ತಯಾರಿಸಿದ್ದೀರಾ..?
ಮ್ಯಾಗಿ ಲಡ್ಡು ಈ ಶಬ್ದವನ್ನ ಕೇಳೋಕೆ ವಿಚಿತ್ರ ಎನಿಸುತ್ತಿರಬಹುದು ಅಲ್ಲವೇ..? ಸಿಹಿ ಹಾಗೂ ಮಸಾಲೆಯುಕ್ತ ಈ ಲಡ್ಡು ಇದೀಗ ಟ್ರೆಂಡ್ನಲ್ಲಿದೆ. ಬೆಲ್ಲದ ಪುಡಿ, ಬೆಣ್ಣೆ, ಏಲಕ್ಕಿ ಪುಡಿಯನ್ನ ಬಾಣಲೆಯಲ್ಲಿ ಬಿಸಿ ಮಾಡಿ ಬಳಿಕ ಪುಡಿ ಮಾಡಿ ಮ್ಯಾಗಿ ನ್ಯೂಡಲ್ಸ್ ನ್ನು ಇದಕ್ಕೆ ಹಾಕಲಾಗುತ್ತದೆ.
ಈ ಮಿಶ್ರಣದಿಂದ ಬಳಿಕ ಲಡ್ಡುವನ್ನ ತಯಾರಿಸಲಾಗಿದೆ. ಇದನ್ನ ಚಟ್ನಿ ಇಲ್ಲವೇ ಸಾಸ್ ಜೊತೆ ಸರ್ವ್ ಮಾಡಬೇಕಂತೆ. ಈ ವಿಚಿತ್ರ ತಿನಿಸನ್ನ ನೀವು ಟ್ರೈ ಮಾಡ್ತೀರಾ..? ಆದರೆ ನೆಟ್ಟಿಗರಂತೂ ಈ ರೆಸಿಪಿ ಮೇಲೆ ಟ್ರೋಲ್ ಮೇಲೆ ಟ್ರೋಲ್ ಮಾಡ್ತಿದ್ದಾರೆ.
https://twitter.com/Aro_toxin/status/1382612342920269824