alex Certify ವೈರಲ್ ಆಯ್ತು ಹಣ್ಣು ವ್ಯಾಪಾರಿಯ ನಿರರ್ಗಳ ಇಂಗ್ಲಿಷ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಹಣ್ಣು ವ್ಯಾಪಾರಿಯ ನಿರರ್ಗಳ ಇಂಗ್ಲಿಷ್‌

ತಳ್ಳು ಗಾಡಿಗಳನ್ನು ನಿಷೇಧಿಸಿ, ಅವುಗಳನ್ನು ರಸ್ತೆಗಳಿಂದ ತೆರವುಗೊಳಿಸಲು ಮುಂದಾದ ಇಂದೋರ್‌ ಮಹಾನಗರ ಪಾಲಿಕೆ ವಿರುದ್ಧ ಹೋರಾಟ ನಡೆಸಲು ಮುಂದಾದ ಹಣ್ಣಿನ ವ್ಯಾಪಾರಿಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಯ್ಸಾ ಅನ್ಸಾರಿ ಹೆಸರಿನ 36 ವರ್ಷದ ಈ ಮಹಿಳೆ, ಇಲ್ಲಿನ ದೇವಿ ಅಹಿಲ್ಯಾ ಬಾಯಿ ವಿಶ್ವ ವಿದ್ಯಾಲಯದಲ್ಲಿ ಮೆಟೀರಿಯಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಕ್ಕ ಉದ್ಯೋಗವನ್ನು ತೊರೆದು ಕುಟುಂಬದ ಬ್ಯುಸಿನೆಸ್ ಆದ ಹಣ್ಣು & ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ.

“ನನಗೆ ವಿಜ್ಞಾನಿ ಆಗಬೇಕು ಎಂದು ಯಾವಾಗಲೂ ಅನಿಸುತ್ತಿತ್ತು. ಆದರೆ ಕೌಟುಂಬಿಕ ಸಮಸ್ಯೆಗಳ ಕಾರಣದಿಂದ, ಹಣ್ಣು ಮತ್ತು ತರಕಾರಿ ವ್ಯಾಪಾರ ಮಾಡುವ ಮೂಲಕ ನನ್ನ ಕುಟುಂಬದ ನೆರವಿಗೆ ನಿಲ್ಲಬೇಕಾಯಿತು” ಎಂದು ಅನ್ಸಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...