ತಳ್ಳು ಗಾಡಿಗಳನ್ನು ನಿಷೇಧಿಸಿ, ಅವುಗಳನ್ನು ರಸ್ತೆಗಳಿಂದ ತೆರವುಗೊಳಿಸಲು ಮುಂದಾದ ಇಂದೋರ್ ಮಹಾನಗರ ಪಾಲಿಕೆ ವಿರುದ್ಧ ಹೋರಾಟ ನಡೆಸಲು ಮುಂದಾದ ಹಣ್ಣಿನ ವ್ಯಾಪಾರಿಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಯ್ಸಾ ಅನ್ಸಾರಿ ಹೆಸರಿನ 36 ವರ್ಷದ ಈ ಮಹಿಳೆ, ಇಲ್ಲಿನ ದೇವಿ ಅಹಿಲ್ಯಾ ಬಾಯಿ ವಿಶ್ವ ವಿದ್ಯಾಲಯದಲ್ಲಿ ಮೆಟೀರಿಯಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಕ್ಕ ಉದ್ಯೋಗವನ್ನು ತೊರೆದು ಕುಟುಂಬದ ಬ್ಯುಸಿನೆಸ್ ಆದ ಹಣ್ಣು & ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ.
“ನನಗೆ ವಿಜ್ಞಾನಿ ಆಗಬೇಕು ಎಂದು ಯಾವಾಗಲೂ ಅನಿಸುತ್ತಿತ್ತು. ಆದರೆ ಕೌಟುಂಬಿಕ ಸಮಸ್ಯೆಗಳ ಕಾರಣದಿಂದ, ಹಣ್ಣು ಮತ್ತು ತರಕಾರಿ ವ್ಯಾಪಾರ ಮಾಡುವ ಮೂಲಕ ನನ್ನ ಕುಟುಂಬದ ನೆರವಿಗೆ ನಿಲ್ಲಬೇಕಾಯಿತು” ಎಂದು ಅನ್ಸಾರಿ ತಿಳಿಸಿದ್ದಾರೆ.