ಮಧ್ಯ ಪ್ರದೇಶದಲ್ಲೂ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್ ಸೋಂಕಿನ ವಿರುದ್ಧ ಈಗಾಗಲೇ ದೇಶಾದ್ಯಂತ ಲಸಿಕೆಯ ಹೋರಾಟ ನಡೆಯುತ್ತಿದೆ. ಈ ನಡುವೆ ಮಧ್ಯ ಪ್ರದೇಶದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ ಸಚಿವೆ ಉಷಾ ಠಾಕೂರ್ ಕೊರೊನಾದಿಂದ ಮುಕ್ತಿಗಾಗಿ ದೇವರ ಮೊರೆ ಹೋಗಿದ್ದಾರೆ. ಇಂದೋರ್ನಲ್ಲಿ ಅವರು ಮಾಸ್ಕ್ಗಳನ್ನ ಧರಿಸದೇ ಪೂಜಾ ಕಾರ್ಯ ನಡೆಸಿದ್ದು ಕಂಡು ಬಂತು.
ಇಂದೋರ್ನ ವಿಮಾನ ನಿಲ್ದಾಣದಲ್ಲಿ ದೇವಿ ಅಹಿಲ್ಯಬಾಯಿ ಹೋಲ್ಕರ್ ಪ್ರತಿಮೆ ಎದುರು ಉಷಾ ಠಾಕೂರ್ ಪೂಜಾ ಕಾರ್ಯವನ್ನ ನಡೆಸಿದ್ರು. ದೇವತೆಯ ಎದುರು ಚಪ್ಪಾಳೆ ತಟ್ಟುತ್ತಾ ಮಂತ್ರಗಳನ್ನ ಪಠಿಸಿದ್ದಾರೆ. ಈ ಪೂಜಾ ಕಾರ್ಯಕ್ಕೆ ವಿಮಾನ ನಿಲ್ದಾಣ ನಿದೇಶಕಿ ಆರ್ಯಮಾ ಸನ್ಯಾಸ್ ಹಾಗೂ ಸಿಬ್ಬಂದಿ ಸಹ ಸಾಕ್ಷಿಯಾದ್ರು.
ಸಾರ್ವಜನಿಕ ಸ್ಥಳಗಳಲ್ಲಿ ಸಚಿವೆ ಉಷಾ ಠಾಕೂರ್ ಸಾಕಷ್ಟು ಬಾರಿ ಮಾಸ್ಕ್ ಧರಿಸದೇ ಇರೋದು ಕಂಡುಬಂದಿದೆ. ವಿಧಾನಸಭಾ ಕಲಾಪದ ವೇಳೆ ಮಾಸ್ಕ್ ಏಕೆ ಧರಿಸುತ್ತಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಠಾಕೂರ್, ನನಗೆ ಮಾಸ್ಕ್ನ ಅವಶ್ಯಕತೆ ಇಲ್ಲ. ಯಾಕೆಂದರೆ ನಾನು ಪ್ರತಿ ದಿನ ಹೋಮ ಹವನ ಮಾಡುತ್ತೇನೆ ಹಾಗೂ ಹನುಮಾನ್ ಚಾಲೀಸಾ ಪಠಿಸುತ್ತೇನೆ ಎಂದು ಹೇಳಿದ್ರು.
ಈ ಹಿಂದೆ ಉಷಾ ಠಾಕೂರ್ ಮನೆಯಲ್ಲಿ ಬೆರಣಿಯಿಂದ ಹವನ ಮಾಡಿದ್ರೆ 12 ಗಂಟೆಗಳ ಕಾಲ ಮನೆ ಸ್ಯಾನಿಟೈಸ್ ಆಗಿ ಇರಲಿದೆ ಎಂದು ಹೇಳಿದ್ದರು.