ತಮ್ಮ ಖಾತೆಯಿಂದ ಹಣ ಡ್ರಾ ಮಾಡುವ ಸಲುವಾಗಿ ರೈತರು ರಾತ್ರಿಪೂರ್ತಿ ಬ್ಯಾಂಕ್ ಎದುರು ಸರತಿ ಸಾಲಿನಲ್ಲಿ ನಿಂತ ಘಟನೆ ಮಧ್ಯ ಪ್ರದೇಶದ ವಿದಿಷಾ ಎಂಬಲ್ಲಿ ನಡೆದಿದೆ. ಬ್ಯಾಂಕ್ನ ಸಿಬ್ಬಂದಿಗೆ ಕೊರೊನಾ ವೈರಸ್ ಬಂದಿದ್ದರಿಂದ 2 ವಾರಗಳ ಕಾಲ ಈ ಬ್ಯಾಂಕ್ನ್ನು ಕ್ಲೋಸ್ ಮಾಡಲಾಗಿತ್ತು.
ಬ್ಯಾಂಕ್ನಲ್ಲಿ ಜನಸಂದಣಿಯನ್ನ ತಪ್ಪಿಸುವ ಸಲುವಾಗಿ ಪ್ರತಿದಿನ 150 ಟೋಕನ್ಗಳನ್ನ ವಿತರಣೆ ಮಾಡುವ ಮೂಲಕ ಟೋಕನ್ ಆಧಾರದಲ್ಲಿ ಗ್ರಾಹಕರಿಗೆ ಸೇವೆಯನ್ನ ನೀಡಲಾಗ್ತಿದೆ.
ಹೀಗಾಗಿ ಅನೇಕ ರೈತರು ಬ್ಯಾಂಕ್ ಆವರಣದಲ್ಲೇ ಬಟ್ಟೆ ಹಾಸಿಕೊಂಡು ಮಲಗಿ ತಮ್ಮ ಸರದಿಗಾಗಿ ಕಾದಿದ್ದಾರೆ. ಇನ್ನೂ ಕೆಲವರು ಉದ್ದನೆಯ ಸಾಲಿನಲ್ಲಿ ತಮ್ಮ ಜಾಗವನ್ನ ಗುರುತಿಸಿಕೊಳ್ಳಲು ಕಲ್ಲುಗಳನ್ನ ಇಟ್ಟಿದ್ದಾರೆ.
ಹಣವನ್ನ ಡ್ರಾ ಮಾಡಲು ಟೋಕನ್ ಪಡೆಯಬೇಕಾಗಿದ್ದರಿಂದ ರೈತರು ಈ ರೀತಿ ರಾತ್ರಿಯೆಲ್ಲ ಬ್ಯಾಂಕ್ ಎದುರು ಕಾದಿದ್ದಾರೆ. ಈಗಾಗಲೇ 150 ಟೋಕನ್ ವಿತರಿಸಲಾಗಿದ್ದು ಮಿಕ್ಕವರಿಗೆ ನಾಳೆ ಅವಕಾಶ ಸಿಗಲಿದೆ ಅಂತಾ ತಹಶೀಲ್ದಾರ್ ಮಾಹಿತಿ ನೀಡಿದ್ರು.
ಇಲ್ಲಿ ಸರದಿಯಲ್ಲಿ ಕಾಯುತ್ತಿರುವ ಅನೇಕರ ಕೈಯಲ್ಲಿ ಡೀಸೆಲ್ ಖರೀದಿ ಮಾಡಲು ಹಾಗೂ ರಸಗೊಬ್ಬರ ಖರೀದಿಗೂ ಹಣವಿರಲಿಲ್ಲ. ಇನ್ನೂ ಕೆಲವರು ತಮ್ಮ ಮಕ್ಕಳ ಮದುವೆಗಾಗಿ ಹಣ ಡ್ರಾ ಮಾಡಲು ಆಗಮಿಸಿದ್ದರು.