1984ರ ಭೂಪಾಲ್ ಅನಿಲ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಸ್ಮಾರಕವನ್ನ ನಿರ್ಮಿಸಲಾಗುವುದು ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ವಿಷಕಾರಿ ಅನಿಲ ಸೋರಿಕೆ ದುರಂತಕ್ಕೆ 36 ವರ್ಷ ತುಂಬಿದ ಪ್ರಯುಕ್ತ ದುರಂತದಲ್ಲಿ ಪತಿಯನ್ನ ಕಳೆದುಕೊಂಡ ವಿಧವೆಯರಿಗೆ 1 ಸಾವಿರ ರೂಪಾಯಿಗಳ ಪಿಂಚಣಿ ಪುನಾರಂಭಿಸೋದಾಗಿ ಚೌಹಾಣ್ ಘೋಷಿಸಿದ್ದಾರೆ.
1984ರ ಡಿಸೆಂಬರ್ 2 ಹಾಗೂ 3ನೇ ತಾರೀಖಿನಂದು ಕೀಟನಾಶಕ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದಾಗಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲಾಗುವುದು. ಅಲ್ಲದೇ ದುರಂತದಲ್ಲಿ ಸಾವಿಗೀಡಾದ ವಿಧವೆಯರಿಗೆ 2019ರಲ್ಲಿ ನೀಡಲಾಗುತ್ತಿದ್ದ ಪಿಂಚಣಿ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ನಗರದ ಹೊರವಲಯದಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಿಂದ 1984ರ ಡಿಸೆಂಬರ್ ಮಧ್ಯರಾತ್ರಿ ಮಿಥೈಲ್ ಐಸೋಸೈನೇಟ್ ಸೋರಿಕೆಯಿಂದಾಗಿ 15 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.