alex Certify ಇಲ್ಲಿದೆ ವರ್ಷದ ಕೊನೆ ಚಂದ್ರ ಗ್ರಹಣದ ಟೈಮಿಂಗ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ವರ್ಷದ ಕೊನೆ ಚಂದ್ರ ಗ್ರಹಣದ ಟೈಮಿಂಗ್ಸ್

2020ರ ಕೊನೆಯ ಚಂದ್ರಗ್ರಹಣವು ಕಾರ್ತಿಕ ಪೂರ್ಣಿಮೆಯ ನವೆಂಬರ್‌ 30ರಂದು ಜರುಗಲಿದೆ. ಈ ದೃಶ್ಯಕಾವ್ಯವು ಮಧ್ಯಾಹ್ನ 1:04 ಗಂಟೆಯಿಂದ ಸಂಜೆ 5:22 ಗಂಟೆಯವರೆಗೂ ಗೋಚರಿಸಲಿದೆ ಎಂದು ಅಂದಾಜಿಸಲಾಗಿದೆ.

ಇದೇ ವರ್ಷದ ಜನವರಿ 10, ಜೂನ್ 5 ಹಾಗೂ ಜುಲೈ 4ರಂದು ಚಂದ್ರ ಗ್ರಹಣಗಳು ಸಂಭವಿಸಿದ್ದವು. ಈ ಬಾರಿಯ ಚಂದ್ರ ಗ್ರಹಣವು ಹಿಂದಿನವಕ್ಕಿಂತ ತುಸು ಹೆಚ್ಚಿನ ಅವಧಿಗೆ ಇರಲಿದೆ.

ಸೂರ್ಯಾಸ್ತಕ್ಕೂ ಮುನ್ನ ಚಂದ್ರ ಗ್ರಹಣ ಸಂಭವಿಸುತ್ತಿರುವ ಕಾರಣ ದೇಶದ ಬಹುತೇಕ ಕಡೆಗಳಲ್ಲಿ ಜನರು ಈ ದೃಶ್ಯವನ್ನು ನೋಡಲು ಆಗುವುದಿಲ್ಲ.

ಗ್ರಹಣವು ನವೆಂಬರ್‌ 30ರ ಮದ್ಯಾಹ್ನ 1:04ಕ್ಕೆ ಆರಂಭಗೊಂಡು, 3:13ರ ವೇಳೆಗೆ ಮಧ್ಯಂತರಕ್ಕೆ ಆಗಮಿಸಲಿದೆ. ಅದೇ ದಿನ ಸಂಜೆ 5:22ಕ್ಕೆ ಅಂತ್ಯವಾಗಲಿದೆ. ಗ್ರಹಣದ ಪರಿಣಾಮವು ವೃಷಭ ರಾಶಿ ರೋಹಿಣಿ ನಕ್ಷತ್ರದವರಿಗೆ ಆಗಲಿದ್ದು, ಅನ್ಯ ರಾಶಿಗಳ ಮೇಲೂ ಸಹ ತಕ್ಕಮಟ್ಟಿಗೆ ಆಗಲಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...