ಜನಸಂಖ್ಯಾ ಸ್ಫೋಟದ ಪರಿಣಾಮದಿಂದಾಗಿ ದೇಶದ ಅರಣ್ಯ ಸಂಪತ್ತು ಕ್ಷೀಣಿಸುತ್ತಲೇ ಇದೆ. ಪ್ರಾಣಿಗಳಿಗೆ ತಂತಮ್ಮ ಸ್ವಾಭಾವಿಕ ನೆಲೆಯಲ್ಲಿ ಮಾನವನ ಉಪಟಳವಿಲ್ಲದೆ ಬದುಕುವುದು ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ.
ಇಂಥ ಚಾಲೆಂಜಿಂಗ್ ಪರಿಸ್ಥಿತಿಯಲ್ಲೂ ಸಹ ಪ್ರಾಣಿಗಳ ಜೀವಿಸುವ ಹಕ್ಕನ್ನು ಗೌರವಿಸುವ ಮಂದಿ ಅಪರೂಪಕ್ಕೆ ಅಲ್ಲಿ ಇಲ್ಲಿ ಇನ್ನೂ ಇದ್ದಾರೆ. ಇಂಥದ್ದೇ ಗುಣವಿರುವ ಲೋಕೋ ಪೈಲಟ್‌ಗಳಾದ ಎಸ್.ಸಿ. ಸರ್ಕಾರ್ ಹಾಗೂ ಟಿ. ಕುಮಾರ್ ಅವರು ಹಳಿಗಳ ಮೇಲೆ ಆನೆ ಮರಿಯೊಂದು ಹೋಗುತ್ತಿದ್ದ ಕಾರಣ ರೈಲನ್ನು ಕೆಲಕಾಲ ನಿಲ್ಲಿಸಿದ್ದಾರೆ.
ಉಲ್ಕೆಗಳು ಮತ್ತು ಕ್ಷುದ್ರ ಗ್ರಹಗಳಿಂದ ಭೂಮಿ ಮೇಲೆ ಪ್ರತಿವರ್ಷ ಬೀಳುತ್ತೆ 5000 ಟನ್ ಧೂಳು
ಆನೆ ಮರಿಯನ್ನು ಕಾಣುತ್ತಲೇ ಸ್ವಲ್ಪ ದೂರದಲ್ಲೇ ಬ್ರೇಕ್ ಹಾಕಿದ ಲೋಕೋಪೈಲಟ್‌ಗಳು, ಅದು ಹಳಿ ದಾಟುತ್ತಲೇ ಇಂಜಿನ್ ಅನ್ನು ಅಲ್ಲಿಂದ ಮುಂದಕ್ಕೆ ಕೊಂಡೊಯ್ದಿದ್ದಾರೆ.