alex Certify ಇನ್ನೂ 15 ದಿನ ಬಂದ್: ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೂ 15 ದಿನ ಬಂದ್: ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ಮೇ 17 ರ ವರೆಗೆ ಲಾಕ್ ಡೌನ್ ಮುಂದುವರೆಯಲಿದ್ದು, ಮೂರೂ ಜೋನ್ ಗಳಲ್ಲಿ ಶಾಲಾ-ಕಾಲೇಜು ಓಪನ್ ಆಗಲ್ಲ. ಹೋಟೆಲ್, ರೆಸ್ಟೋರೆಂಟ್, ಪಬ್ ಓಪನ್ ಮಾಡುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದಿಂದ ಮಾರ್ಗಸೂಚಿ ಹೊರಡಿಸಲಾಗಿದೆ.

ಖಾಸಗಿ ಕಂಪನಿ ಕಚೇರಿಗಳನ್ನು ಓಪನ್ ಮಾಡಬಹುದಾಗಿದೆ. ಖಾಸಗಿ ಕಂಪನಿಗಳಲ್ಲಿ ಶೇಕಡ 33 ರಷ್ಟು ಸಿಬ್ಬಂದಿಗೆ ಅವಕಾಶ ನೀಡಲಾಗುವುದು. ಎಲ್ಲ ವಲಯಗಳಲ್ಲಿ ಅಗತ್ಯ ವಸ್ತುಗಳು ಎಂದಿನಂತೆ ಸಿಗಲಿವೆ. ಅಂತರ ರಾಜ್ಯ ಸಾರಿಗೆ ಸಂಪರ್ಕ ಸ್ಥಗಿತ ಮುಂದುವರೆಯಲಿದೆ.

ಸರಕು ಸಾಗಾಣಿಕೆ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಮಾಲ್ ತೆರೆಯುವಂತಿಲ್ಲ. ಸರ್ಕಾರಿ ಕಚೇರಿಗೆ ಹಿರಿಯ ಅಧಿಕಾರಿಗಳು ಮಾತ್ರ ಬರಬೇಕು. ಮಕ್ಕಳು, ವಯೋವೃದ್ಧರು ಮನೆಯಲ್ಲೇ ಇರಬೇಕು. ಆಟೋ, ಕಾರ್, ಸೈಕಲ್ ರಿಕ್ಷಾ ಎಂದಿನಂತೆ ಸ್ಥಗಿತ ಮುಂದುವರೆಯಲಿದೆ.

ಆರೆಂಜ್ ಜೋನ್ ಗಳಲ್ಲಿ ಕಾರ್, ಟ್ಯಾಕ್ಸಿ ಓಡಾಡಬಹುದು. ಕಾರ್ ನಲ್ಲಿ ಚಾಲಕ ಸೇರಿ ಮೂವರಿಗೆ ಮಾತ್ರ ಸಂಚರಿಸಲು ಅವಕಾಶವಿದೆ. ಮೆಟ್ರೋ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ.

ಗ್ರೀನ್ ಜೋನ್ ಗಳಲ್ಲಿ ಬಸ್ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಶೇಕಡ 50 ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬಹುದಾಗಿದೆ. ರೈಲು, ವಿಮಾನ ಸಂಚಾರಕ್ಕೆ ನಿರ್ಬಂಧ ಮುಂದುವರೆದಿದೆ. ಮದ್ಯ, ತಂಬಾಕು, ಗುಟ್ಕಾ ಮಾರಾಟ ಬಂದ್ ಮುಂದುವರೆದಿದೆ. ಬ್ಯೂಟಿ ಪಾರ್ಲರ್, ರಸ್ತೆಬದಿ ತಿಂಡಿ, ಆಹಾರ ತಿನಿಸುಗಳ ಮಾರಾಟ, ಬಟ್ಟೆ, ಚಿನ್ನ – ಬೆಳ್ಳಿ ಅಂಗಡಿ ತೆರೆಯಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...