alex Certify ಲಾಕ್‌ ಡೌನ್ ಎಫೆಕ್ಟ್: ಗುಹೆಯಲ್ಲಿ 25 ದಿನ ಕಳೆದ ವಿದೇಶಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್ ಎಫೆಕ್ಟ್: ಗುಹೆಯಲ್ಲಿ 25 ದಿನ ಕಳೆದ ವಿದೇಶಿಗರು

ರಿಷಿಕೇಶ ಗುಹೆಯಲ್ಲಿ ಪತ್ತೆಯಾದ ಆರು ವಿದೇಶಿಗರ ಬಗ್ಗೆ ಹೊಸ ಮಾಹಿತಿ ಬಹಿರಂಗವಾಗಿದೆ. ಲಾಕ್ ಡೌನ್ ಮೊದಲು ಅವರು ಹೋಟೆಲ್‌ ಗಳಲ್ಲಿಯೇ ಇದ್ದರು. ಆದರೆ ಹಣವಿಲ್ಲದ ಕಾರಣ ಅವ್ರು ಗುಹೆಗೆ ಹೋಗಿದ್ದರಂತೆ. ವಿದೇಶಿ ನಾಗರಿಕರು ಗುಹೆಯಲ್ಲಿಯೇ 25 ದಿನಗಳನ್ನು ಕಳೆದಿದ್ದಾರೆ. ಗಂಗಾ ನೀರನ್ನು ಅಡುಗೆಗೆ ಬಳಸುತ್ತಿದ್ದರು ಎನ್ನಲಾಗಿದೆ.

ಪೊಲೀಸರು ಈ ವಿದೇಶಿ ಪ್ರಜೆಗಳನ್ನು ಶನಿವಾರ ಗುಹೆಯಲ್ಲಿ ಪತ್ತೆ ಹಚ್ಚಿದ್ದರು. ಇವರಲ್ಲಿ ನಾಲ್ಕು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಇವರು ಯುಎಸ್, ಫ್ರಾನ್ಸ್, ಟರ್ಕಿ, ಉಕ್ರೇನ್ ಮೂಲದವರು.

ಇವರೆಲ್ಲರೂ ಮಾರ್ಚ್ 24 ರವರೆಗೆ ಹೋಟೆಲ್‌ನಲ್ಲಿಯೇ ಇದ್ದರು. ಹೋಟೆಲ್ ತೊರೆದ ನಂತರ ವಿದೇಶಿ ಪ್ರವಾಸಿಗರು ಪರಸ್ಪರ ಸಂಪರ್ಕಕ್ಕೆ ಬಂದರು. ನಂತರ ಎಲ್ಲರೂ ನೀಲಕಂಠ ರಸ್ತೆಯ ಗಂಗಾ ತೀರದಲ್ಲಿರುವ ಗುಹೆಯೊಂದಕ್ಕೆ ಹೋಗಲು ನಿರ್ಧರಿಸಿದರು. ವಿದೇಶಿ ನಾಗರಿಕರು ಗುಹೆಯ ಬಳಿಯ ಮಾರುಕಟ್ಟೆಯಿಂದ ಪಡಿತರ ಮತ್ತು ತರಕಾರಿಗಳನ್ನು ತರುತ್ತಿದ್ದರು. ಗಂಗೆ ನೀರನ್ನು ಕುಡಿಯಲು ಮತ್ತು ಸ್ನಾನಕ್ಕೆ ಬಳಸುತ್ತಿದ್ದರು ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...