ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ದೇಶಾದ್ಯಂತ ಎಲ್ಲೂ ಸಹ ಜನರು ದೊಡ್ಡ ಮಟ್ಟದಲ್ಲಿ ಹೊರಗೆ ಬರುತ್ತಿಲ್ಲ ಎಂಬುದು ತಿಳಿದಿರುವ ವಿಚಾರ. ಇಂಥ ಪರಿಸ್ಥಿತಿಯಲ್ಲಿ ಪ್ರಾಣಿಗಳು ನಗರಗಳ ಮುಖ್ಯ ಹೆದ್ದಾರಿಗಳಲ್ಲಿ ಬಂದು ಸ್ವಚ್ಛಂದವಾಗಿ ವಿಹಾರ ಮಾಡುತ್ತಿವೆ.
ಪ್ರಾಣಿಗಳು ಹೀಗೆ ನಗರಗಳಿಗೆ ಬಂದು ಬಲೇ ಮಜವಾಗಿ ಅಡ್ಡಾಡುತ್ತಾ ಇರುವುದನ್ನು ನೋಡಲು ಖುಷಿಯಾಗುತ್ತಿದೆ. ಈ ರೀತಿ ಅನೇಕ ವಿಡಿಯೋಗಳು ನೆಟ್‌ನಲ್ಲಿ ವೈರಲ್ ಆಗುತ್ತಿವೆ.
ಇಂಥದ್ದೇ ಒಂದು ವಿಡಿಯೋದಲ್ಲಿ ಮುಂಬೈನ ಮಿಥಿ ನದಿ ಬಳಿ ಜಿಂಕೆಯ ಹಿಂಡೊಂದು ಸ್ವಚ್ಛಂದವಾಗಿ ಅಡ್ಡಾಡುತ್ತಿರುವುದನ್ನು ಪರಿಸರವಾದಿ ಅಫ್ರೋಝ್ ಶಾ ಸೆರೆ ಹಿಡಿದಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಪ್ರಕೃತಿ ಮಾತೆಯನ್ನು ಸುಮ್ಮನೆ ಹಾಗೇ ಬಿಟ್ಟರೆ ತನ್ನಿಂತಾನೇ ಗುಣಮುಖಳಾಗುತ್ತಾಳೆ” ಎಂದು ಅಫ್ರೋಝ್ ಖಾನ್ ಈ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
https://twitter.com/raghuraj85/status/1278965816617103360?ref_src=twsrc%5Etfw%7Ctwcamp%5Etweetembed%7Ctwterm%5E1278965816617103360%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Flockdown-effect-a-herd-of-deer-spotted-in-the-heart-of-mumbai-netizens-are-stunned-watch%2F617138