ನಾಯಿಮರಿಯೊಂದನ್ನು ಮನೆಗೆ ಬರಮಾಡಿಕೊಳ್ಳಲು ಅದ್ಧೂರಿಯಾಗಿ ಆರತಿ ಎತ್ತಿ ತಿಲಕವಿಟ್ಟ ಕುಟುಂಬವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಜಿ ಹೆಸರಿನ ಈ ನಾಯಿ ಮರಿಯನ್ನು ಮನೆಯ ಯಜಮಾನಿ ಆರತಿ ಎತ್ತಿ ಸ್ವಾಗತಿಸುತ್ತಿರುವ ವಿಡಿಯೋ TikTokನಲ್ಲಿ ವೈರಲ್ ಆಗಿದೆ. ಇದಾದ ಬಳಿಕ ನಾಯಿಮರಿಯ ಹೆಜ್ಜೆ ಗುರುತುಗಳನ್ನು ಬಿಳಿ ಬಣ್ಣದ ಕರ್ಚಿಫ್ ಒಂದರ ಮೇಲೆ ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ.
ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಕುಟುಂಬದ ಈ ಸ್ವಾಗತಕ್ಕೆ ಶ್ಲಾಘನೆಯ ಮಾತುಗಳು ಕೇಳಿ ಬಂದಿವೆ.