
ಗುರುಗಾಂವ್ನ ಸೆಕ್ಟರ್ 82ರ ವಿಲಾಸ್ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನಲ್ಲಿ ಈ ಘಟನೆ ಸಂಭವಿಸಿದೆ.
ಸಿಸಿ ಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬ ಮಳೆಯಿಂದ ಬಚಾವಾಗೋಕೆ ಮರದ ಕೆಳಗೆ ಆಶ್ರಯ ಪಡೆದಿರೋದನ್ನ ಕಾಣಬಹುದಾಗಿದೆ. ಕೂಡಲೇ ಮರಕ್ಕೆ ಮಿಂಚು ಬಡಿದಿದ್ದು, ಕೆಲವೇ ಕ್ಷಣಗಳಲ್ಲಿ ಮೂವರು ಕುಸಿದು ಬಿದ್ದಿದ್ದಾರೆ. ಮರದ ಎದುರು ನಿಂತಿದ್ದ ವ್ಯಕ್ತಿ ಕೂಡ ಸ್ವಲ್ಪ ಸಮಯ ಬಿಟ್ಟು ಕುಸಿದು ಬಿದ್ದಿದ್ದಾನೆ. ಓರ್ವ ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ರೆ ಇನ್ನೊಬ್ಬನನ್ನ ಐಸಿಯುವಿನಲ್ಲಿ ಇಡಲಾಗಿದೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.