alex Certify ನಡುರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿದ ಚಿರತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿದ ಚಿರತೆ…!

ಘಾಜಿಯಾಬಾದ್​ನ ನಡುರಸ್ತೆಯೊಂದರಲ್ಲಿ ಚಿರತೆಯೊಂದು ರಾಜಾರೋಷವಾಗಿ ನಡೆದಾಡುತ್ತಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಭಿಷೇಕ್​ ಪ್ರಸಾದ್​​ ಎಂಬವರು ತಮ್ಮ ಟ್ವಿಟರ್​ ಖಾತೆಯಲ್ಲಿ 17 ಸೆಕೆಂಡ್​ನ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ.

ಘಾಜಿಯಾಬಾದ್ನನ ರಜನಿ ನಗರದ ಏರಿಯಾದಲ್ಲಿ ಚಿರತೆ ಹೀಗೆ ನಡುರಸ್ತೆಯಲ್ಲಿ ಓಡಾಡಿದೆ. ಈ ಚಿರತೆ ಮೊದಲು ಘಾಜಿಯಾಬಾದ್​ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರ ಜನರೇಟರ್​ ಕೋಣೆಯನ್ನ ಪ್ರವೇಶಿಸಿತ್ತು.

ಜನರೇಟರ್​ ಪ್ರಾರಂಭವಾಗುತ್ತಿದ್ದಂತೆಯೇ ಚಿರತೆ ಕೋಣೆಯಿಂದ ಹಾರಿದೆ. ಕೂಡಲೇ ಹಲವಾರು ಕಾರ್ಮಿಕರು ಚಿರತೆ ಮೇಲೆ ಹಲ್ಲೆ ಮಾಡಿದ್ರು. ಇದಾದ ಬಳಿಕ ಅಲ್ಲಿಂದ ತಪ್ಪಿಸಿಕೊಂಡ ಚಿರತೆ ಮರವೊಂದನ್ನ ಹತ್ತಿ ಇನ್ಸ್​ಟಿಟ್ಯೂಟ್​ ಕ್ಯಾಂಪಸ್​ಗೆ ಪ್ರವೇಶಿಸಿತು ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

— ᴀʙʜɪꜱʜᴇᴋ ᴘʀᴀꜱᴀᴅ (@rinku10m) November 25, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...