
ಅಭಿಷೇಕ್ ಪ್ರಸಾದ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ 17 ಸೆಕೆಂಡ್ನ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ.
ಘಾಜಿಯಾಬಾದ್ನನ ರಜನಿ ನಗರದ ಏರಿಯಾದಲ್ಲಿ ಚಿರತೆ ಹೀಗೆ ನಡುರಸ್ತೆಯಲ್ಲಿ ಓಡಾಡಿದೆ. ಈ ಚಿರತೆ ಮೊದಲು ಘಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರ ಜನರೇಟರ್ ಕೋಣೆಯನ್ನ ಪ್ರವೇಶಿಸಿತ್ತು.
ಜನರೇಟರ್ ಪ್ರಾರಂಭವಾಗುತ್ತಿದ್ದಂತೆಯೇ ಚಿರತೆ ಕೋಣೆಯಿಂದ ಹಾರಿದೆ. ಕೂಡಲೇ ಹಲವಾರು ಕಾರ್ಮಿಕರು ಚಿರತೆ ಮೇಲೆ ಹಲ್ಲೆ ಮಾಡಿದ್ರು. ಇದಾದ ಬಳಿಕ ಅಲ್ಲಿಂದ ತಪ್ಪಿಸಿಕೊಂಡ ಚಿರತೆ ಮರವೊಂದನ್ನ ಹತ್ತಿ ಇನ್ಸ್ಟಿಟ್ಯೂಟ್ ಕ್ಯಾಂಪಸ್ಗೆ ಪ್ರವೇಶಿಸಿತು ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.