ಡೆಹ್ರಾಡೂನ್ನಲ್ಲಿರುವ ಜಾಲಿಗ್ರಾಂಟ್ ವಿಮಾನ ನಿಲ್ದಾಣದ ಆವರಣಕ್ಕೆ ಚಿರತೆಯೊಂದು ಪ್ರವೇಶಿಸಿದ್ದು ವಿಮಾನ ನಿಲ್ದಾಣದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು.
ವಿಮಾನ ನಿಲ್ದಾಣಕ್ಕೆ ಬಂದು ಗಲಿಬಿಲಿಗೆ ಒಳಗಾದ ಚಿರತೆ ಟರ್ಮಿನಲ್ ಕಟ್ಟಡದ ಬಳಿ ಇರುವ ಪೈಪ್ ಒಂದರಲ್ಲಿ ಅಡಗಿ ಕುಳಿತಿತ್ತು ಅಂತಾ ಜಾಲಿಗ್ರಾಂಟ್ ವಿಮಾನ ನಿಲ್ದಾಣದ ನಿರ್ದೇಶಕ ಜಿ.ಕೆ. ಗೌತಮ್ ಹೇಳಿದ್ದಾರೆ.
ಚಿರತೆ ಸಿಕ್ಕಾಪಟ್ಟೆ ದೂರದಲ್ಲಿ ಇದ್ದಿದ್ದರಿಂದ ಅದನ್ನ ಗುರುತಿಸೋದು ಕಷ್ಟವಾದರೂ ಸಹ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಚಿರತೆ ತಾನಿದ್ದ ಸ್ಥಳದಿಂದ ಏರ್ಪೋರ್ಟ್ ಒಳಕ್ಕೆ ನುಗ್ಗದಂತೆ ನೋಡುವ ಸಲುವಾಗಿ ಎರಡೂ ಬದಿಯನ್ನ ಬಂದ್ ಮಾಡಲಾಗಿತ್ತು. ಬಳಿಕ ಪೈಪ್ನ್ನ ಕೊರೆದು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನ ರಕ್ಷಿಸಿದ್ದಾರೆ.
ಜಾಲಿಗ್ರಂಟ್ ವಿಮಾನ ನಿಲ್ದಾಣ ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿರೋದ್ರಿಂದ ಅನೇಕ ಬಾರಿ ಈ ನಿಲ್ದಾಣಕ್ಕೆ ಚಿರತೆ, ತೋಳ ಹಾಗೂ ನರಿಗಳು ಎಂಟ್ರಿ ಕೊಟ್ಟಿವೆ.