alex Certify ಸೈಕಲಲ್ಲಿ 100 ಕಿಮೀ ತೆರಳಿ ವಿವಾಹವಾದ ʼವರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲಲ್ಲಿ 100 ಕಿಮೀ ತೆರಳಿ ವಿವಾಹವಾದ ʼವರʼ

ಹಮಿರ್ಪುರ: ಸೈಕಲ್ ನಲ್ಲಿ ಬರೊಬ್ಬರಿ 100 ಕಿ.ಮೀ. ತೆರಳಿ ವರನೊಬ್ಬ ಮದುವೆಯಾದ ಘಟನೆ ಉತ್ತರ ಪ್ರದೇಶದ ಹಮಿರ್ಪುರದಲ್ಲಿ ನಡೆದಿದೆ.

ಹಮಿರ್ಪುರ ಜಿಲ್ಲೆಯ ಪೌಲುಟಿಯಾ ಗ್ರಾಮದ ಕಲ್ಕು ಪ್ರಜಾಪತಿ ಹಾಗೂ ಮಹೊಬಾ ಜಿಲ್ಲೆಯ ಪುನಿಯಾ ಗ್ರಾಮದ ರಿಂಕಿ ಅವರ ವಿವಾಹ ನಿಶ್ಚಯವಾಗಿತ್ತು. ಆದರೆ, ಲಾಕ್ ಡೌನ್ ನಿಂದ ಯಾವುದೇ ಮದುವೆ, ಇತರ ಸಮಾರಂಭಗಳಿಗೆ ಅವಕಾಶವಿರಲಿಲ್ಲ.

ಆದರೆ, ಕಲ್ಕು ಮುಹೂರ್ತ
ಬಿಟ್ಟು ಮದುವೆಯಾಗಲು ಇಚ್ಛೆ ಇರಲಿಲ್ಲ. ಇದರಿಂದ ಸಾಹಸಕ್ಕೆ ಕೈ ಹಾಕಿದ್ದರು. “ಸ್ನೇಹಿತನೂ ನೀನೊಬ್ಬನೇ ಹೋಗಿಯಾದರೂ ಮದುವೆಯಾಗಿ ಬಾ ಎಂದು ಹುರಿದುಂಬಿಸಿದ. ಪೊಲೀಸರು
ಯಾವುದೇ ಮದುವೆ ದಿಬ್ಬಣಕ್ಕೆ ಅವಕಾಶ ನೀಡಿರಲಿಲ್ಲ. ಆದರೆ, ನಾನೊಬ್ಬನೇ ಇದ್ದುದರಿಂದ ಬಿಟ್ಟುಕೊಟ್ಟರು” ಎಂದು ಕಲ್ಕು ಸುದ್ದಿ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದಾರೆ.

ಸೋಮವಾರ ಬೆಳಗ್ಗೆ ತನ್ನ ಮನೆ ಬಿಟ್ಟ ಪ್ರಜಾಪತಿ 100 ಕಿಮೀ ಸೈಕಲ್ ತುಳಿದು ಅದೇ ದಿನ ಹೆಣ್ಣಿನ ಮನೆ ತಲುಪಿದ್ದ. ಮಂಗಳವಾರ ಬಾಬಾ ದನಿಯಾದಾಸ್ ಆಶ್ರಮದಲ್ಲಿ ಮದುವೆ ನಡೆಯಿತು. ಬುಧವಾರ ಕಲ್ಕು ಪ್ರಜಾಪತಿ ತನ್ನ ಪತ್ನಿ ರಿಂಕು ಜತೆಗೆ ಅದೇ ಸೈಕಲ್ ಮೇಲೆ ಮನೆಗೆ ವಾಪಸಾಗಿದ್ದ. “ದೂರದ ಪ್ರಯಾಣದಿಂದ ಸಾಕಷ್ಟು ಸುಸ್ತಾಯಿತು. ಈ ರೀತಿ ನನ್ನ ಮದುವೆ ನೆರವೇರುತ್ತದೆ ಎಂದುಕೊಂಡೇ ಇರಲಿಲ್ಲ. ಆದರೆ, ಇದರಿಂದ ನಾನು ಹಾಗೂ ನನ್ನ ಪತ್ನಿ ಸಂತೋಷಗೊಂಡಿದ್ದೇವೆ” ಎಂದು ಕಲ್ಕು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...