
ಬಿಹಾರದ ವೈಶಾಲಿ ಜಿಲ್ಲೆಯ ಪವನ್ ಯಾದವ್ ಎಂಬವರು ಏಪ್ರಿಲ್ 23ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ವ್ಯಕ್ತಿಯ ಮದುವೆ ಆಮಂತ್ರಣ ಪತ್ರಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ದೇವರ ಫೋಟೋ ಇರಬೇಕಾದ ಜಾಗದಲ್ಲಿ ಲಾಲೂ ಪ್ರಸಾದ್ ಯಾದವ್ರ ಫೋಟೋವನ್ನ ಹಾಕಲಾಗಿದೆ.
ಕೆಂಪು ಹಾಗೂ ಬಂಗಾರ ಬಣ್ಣದ ಆಮಂತ್ರಣ ಪತ್ರಿಕೆಯ ಮೇಲ್ಭಾಗದಲ್ಲಿ ಲಾಲೂ ಪ್ರಸಾದ್ರ ಫೋಟೋ ಪ್ರಿಂಟ್ ಹಾಕಲಾಗಿದೆ. ಫೋಟೋದ ಕೆಳಗೆ ವಧು – ವರರ ಹೆಸರನ್ನ ಮುದ್ರಿಸಲಾಗಿದೆ. ಇದೇ ಆಮಂತ್ರಣ ಪತ್ರಿಕೆಯಲ್ಲಿ ಲಾಲೂ ಪ್ರಸಾದ್ ಯಾದವ್ರನ್ನ ಜೈಲಿನಿಂದ ಬಿಡುಗಡೆ ಮಾಡಬೇಕೆಂದೂ ವರ ಆಗ್ರಹಿಸಿದ್ದಾನೆ.
ಈ ಆಮಂತ್ರಣ ಪತ್ರಿಕೆಯನ್ನ ಲಾಲೂ ಪ್ರಸಾದ್ ಯಾದವ್ರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಯಾದವ್, ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಸೇರಿದಂತೆ ವಿವಿಧ ಆರ್ಜೆಡಿ ನಾಯಕರಿಗೆ ಕಳುಹಿಸಿಕೊಡಲಾಗಿದೆ.
ಪವನ್ ಯಾದವ್, ಲಾಲೂ ಪ್ರಸಾದ್ ಯಾದವ್ರನ್ನ ದೇವರಂತೆ ಆರಾಧಿಸುತ್ತಾರಂತೆ. ಲಾಲೂ ಪ್ರಸಾದ್ ಯಾದವ್ ಜೈಲಿನಿಂದ ಬಿಡುಗಡೆಯಾಗಬೇಕು. ನಾನು ಬಡವನಾದ ಕಾರಣ ನನಗೆ ಹಿರಿಯ ಅಧಿಕಾರಿಗಳು ಭೇಟಿ ಮಾಡಲು ಆಗುತ್ತಿಲ್ಲ. ಹೀಗಾಗಿ ನಾನು ಮದುವೆ ಆಮಂತ್ರಣ ಪತ್ರಿಕೆ ಮೂಲಕ ಈ ಅಭಿಯಾನ ಮಾಡುತ್ತಿದ್ದೇನೆ. ಲಾಲು ಪ್ರಸಾದ್ ಬಿಡುಗಡೆಯಾಗುತ್ತಿದ್ದಂತೆ ನಮ್ಮ ಜೋಡಿಗೆ ಆಶೀರ್ವದಿಸಬೇಕೆಂಬುದು ನನ್ನ ಹಂಬಲವಾಗಿದೆ ಎಂದು ಪವನ್ ಹೇಳಿದ್ದಾನೆ.
