alex Certify ನನ್ನ ಹುಟ್ಟುಹಬ್ಬದ ದಿನವೇ ಲಾಲೂ ರಿಲೀಸ್, ಮಾರನೇ ದಿನವೇ ನಿತೀಶ್ ಕುಮಾರ್ ಗೆ ಬೀಳ್ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಹುಟ್ಟುಹಬ್ಬದ ದಿನವೇ ಲಾಲೂ ರಿಲೀಸ್, ಮಾರನೇ ದಿನವೇ ನಿತೀಶ್ ಕುಮಾರ್ ಗೆ ಬೀಳ್ಕೊಡುಗೆ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಆರೋಪ, ಪ್ರತ್ಯಾರೋಪಗಳ ಜೊತೆಗೆ ರಾಜಕೀಯ ಪಕ್ಷಗಳ ನಾಯಕರಿಂದ ಟೀಕೆ, ವಾಗ್ದಾಳಿ ಮುಂದುವರೆದಿದೆ.

ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ನವಂಬರ್ 9 ರಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಪಕ್ಷದ ನಾಯಕ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.

ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಗೆ ಜಾಮೀನು ಸಿಕ್ಕಿದೆ. ಇನ್ನೊಂದು ಪ್ರಕರಣದಲ್ಲಿ ನವೆಂಬರ್ 9 ರಂದು ಜಾಮೀನು ಸಿಗಲಿದೆ. ನವೆಂಬರ್ 9 ರಂದು ನನ್ನ ಹುಟ್ಟುಹಬ್ಬ ಕೂಡ ಇದೆ. ಇದರ ಮರುದಿನವೇ ಸಿಎಂ ಸ್ಥಾನಕ್ಕೆ ವಿದಾಯ ಹೇಳಲಿರುವ ನಿತಿಶ್ ಜೀ ಅವರಿಗೆ ಬೀಳ್ಕೊಡುಗೆ ನೀಡಲಾಗುವುದು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಆಡಳಿತ ಪಕ್ಷಗಳಾಗಿರುವ ಜೆಡಿಯು –ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾದಲ್ಲಿದ್ದು, ಆರ್.ಜೆ.ಡಿ., ಕಾಂಗ್ರೆಸ್, ಎಲ್.ಜೆ.ಪಿ. ಸೇರಿದಂತೆ ಹಲವು ಪಕ್ಷಗಳ ನಾಯಕರು ಅಧಿಕಾರಕ್ಕೇರುವ ವಿಶ್ವಾಸದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...