alex Certify ನಮೂದಿಸಿದ್ದಕ್ಕಿಂತ ಐದು ಪಟ್ಟು ಹಣ ಹೊರ ಹಾಕ್ತಿದ್ದ ಎಟಿಎಂ ಮುಂದೆ ಜನ ಸಾಗರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮೂದಿಸಿದ್ದಕ್ಕಿಂತ ಐದು ಪಟ್ಟು ಹಣ ಹೊರ ಹಾಕ್ತಿದ್ದ ಎಟಿಎಂ ಮುಂದೆ ಜನ ಸಾಗರ…!

ಉತ್ತರ ಪ್ರದೇಶದ ಕುಶಿನಗರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಎಟಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಟಿಎಂನಲ್ಲಿ ಹಾಕಿದ ಮೊತ್ತಕ್ಕಿಂತ 5 ಪಟ್ಟು ಹೆಚ್ಚು ಹಣ ಹೊರ ಬಂದಿದೆ. ಎಟಿಎಂನಿಂದ 500 ರೂಪಾಯಿಗಳನ್ನು ಗ್ರಾಹಕರು ವಿತ್ ಡ್ರಾ ಮಾಡಿದ್ರೆ 2500 ರೂಪಾಯಿ ಬಂದಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಜನರು ಎಟಿಎಂನಿಂದ ಹಣ ಪಡೆಯಲು ಮುಗಿ ಬಿದ್ದಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಹಣ ವಿತ್ ಡ್ರಾ ಗೆ ಮುಂದಾಗಿದ್ದಾರೆ. ಒಟ್ಟು 15 ಲಕ್ಷ ರೂಪಾಯಿಯನ್ನು ಗ್ರಾಹಕರು ವಿತ್ ಡ್ರಾ ಮಾಡಿದ್ದಾರೆ. ಸೆವೆರಿ ಪಟ್ಟಣದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಎಟಿಎಂನಿಂದ 15 ಲಕ್ಷ ರೂಪಾಯಿ ವಿತ್ ಡ್ರಾ ಆಗ್ತಿದ್ದಂತೆ ಬ್ಯಾಂಕ್ ನೌಕರರಿಗೆ ಅನುಮಾನ ಬಂದಿದೆ. ವಿಷ್ಯ ಗೊತ್ತಾಗ್ತಿದ್ದಂತೆ ನೌಕರರು ದಂಗಾಗಿದ್ದಾರೆ. ತಾಂತ್ರಿಕ ದೋಷದಿಂದ ಈ ಘಟನೆ ನಡೆದಿರುವುದು ಗೊತ್ತಾಗ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹಳೆ ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ನೋಂದಣಿ ಶುಲ್ಕ ಮನ್ನಾ, ತೆರಿಗೆ ವಿನಾಯ್ತಿ

ಸೆವೆರಿ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೆಲ ಗ್ರಾಹಕರಿಂದ ಹಣ ಹಿಂಪಡೆಯಲಾಗಿದೆ. ಉಳಿದವರ ಮಾಹಿತಿ ಕಲೆ ಹಾಕಲಾಗ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...