ಉತ್ತರ ಪ್ರದೇಶದ ಕುಶಿನಗರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಎಟಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಟಿಎಂನಲ್ಲಿ ಹಾಕಿದ ಮೊತ್ತಕ್ಕಿಂತ 5 ಪಟ್ಟು ಹೆಚ್ಚು ಹಣ ಹೊರ ಬಂದಿದೆ. ಎಟಿಎಂನಿಂದ 500 ರೂಪಾಯಿಗಳನ್ನು ಗ್ರಾಹಕರು ವಿತ್ ಡ್ರಾ ಮಾಡಿದ್ರೆ 2500 ರೂಪಾಯಿ ಬಂದಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಜನರು ಎಟಿಎಂನಿಂದ ಹಣ ಪಡೆಯಲು ಮುಗಿ ಬಿದ್ದಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಹಣ ವಿತ್ ಡ್ರಾ ಗೆ ಮುಂದಾಗಿದ್ದಾರೆ. ಒಟ್ಟು 15 ಲಕ್ಷ ರೂಪಾಯಿಯನ್ನು ಗ್ರಾಹಕರು ವಿತ್ ಡ್ರಾ ಮಾಡಿದ್ದಾರೆ. ಸೆವೆರಿ ಪಟ್ಟಣದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಎಟಿಎಂನಿಂದ 15 ಲಕ್ಷ ರೂಪಾಯಿ ವಿತ್ ಡ್ರಾ ಆಗ್ತಿದ್ದಂತೆ ಬ್ಯಾಂಕ್ ನೌಕರರಿಗೆ ಅನುಮಾನ ಬಂದಿದೆ. ವಿಷ್ಯ ಗೊತ್ತಾಗ್ತಿದ್ದಂತೆ ನೌಕರರು ದಂಗಾಗಿದ್ದಾರೆ. ತಾಂತ್ರಿಕ ದೋಷದಿಂದ ಈ ಘಟನೆ ನಡೆದಿರುವುದು ಗೊತ್ತಾಗ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ಹಳೆ ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ನೋಂದಣಿ ಶುಲ್ಕ ಮನ್ನಾ, ತೆರಿಗೆ ವಿನಾಯ್ತಿ
ಸೆವೆರಿ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೆಲ ಗ್ರಾಹಕರಿಂದ ಹಣ ಹಿಂಪಡೆಯಲಾಗಿದೆ. ಉಳಿದವರ ಮಾಹಿತಿ ಕಲೆ ಹಾಕಲಾಗ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.