alex Certify ಕೊರೊನಾ‌ ವೈರಸ್ ಕೊಲ್ಲುವ ಇಲೆಕ್ಟ್ರಾನಿಕ್ ಮಾಸ್ಕ್ ಕಂಡುಹಿಡಿದ ಕೊಲ್ಕತ್ತಾ ವಿದ್ಯಾರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ‌ ವೈರಸ್ ಕೊಲ್ಲುವ ಇಲೆಕ್ಟ್ರಾನಿಕ್ ಮಾಸ್ಕ್ ಕಂಡುಹಿಡಿದ ಕೊಲ್ಕತ್ತಾ ವಿದ್ಯಾರ್ಥಿಗಳು

Kolkata Students Design Electronic Mask Which Can Kill All Kinds ...

ಕೋಲ್ಕತ್ತಾ: ಜಾಧವಪುರ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಕೊರೊನಾ ಹಾಗೂ ಇತರ ವೈರಸ್ ಗಳನ್ನು ಕೊಲ್ಲುವ ಇಲೆಕ್ಟ್ರಾನಿಕ್ ಮಾಸ್ಕ್ ಕಂಡು ಹಿಡಿದಿದ್ದಾರೆ.

ಆ ಮಾಸ್ಕ್ ಹಾಕುವುದರಿಂದ ಕೋವಿಡ್-19 ನಿಂದ ಬಚಾವಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಿಯ ಉಪಕರಣ ವಿಭಾಗದಿಂದ ಈ ಮಾಸ್ಕ್ ಮಾದರಿ ತಯಾರಿಸಲಾಗಿದೆ. ಸಂಬಂಧಪಟ್ಟ ಇಲಾಖೆಗಳ ಅನುಮೋದನೆ ದೊರೆತ ನಂತರವಷ್ಟೆ ಅಧಿಕೃತವಾಗಿ ಉತ್ಪಾದನೆ ಪ್ರಾರಂಭಿಸಲಾಗುವುದು ಎಂದು ಸಂಶೋಧನಾ ತಂಡದಲ್ಲಿದ್ದ ವಿವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಸಿಗುವ ತ್ರಿ ಲೇಯರ್ ಮಾಸ್ಕ್ ಗಿಂತ ಹೆಚ್ಚು ಸುರಕ್ಷಿತವಾಗಿದೆ. ತನ್ನ ಬಳಿ ಬರುವ ಸಾರ್ಸ್- 2 ಸೇರಿ ಯಾವುದೇ ವೈರಸ್ ಗಳನ್ನು ನಾಶ ನಾಡುವ ಸಾಮರ್ಥ್ಯ ಹೊಂದಿದೆ.

“ಮಾದರಿ ಸಿದ್ಧವಿದೆ. ಆದರೆ, ನಾವು ಐಸಿಎಂಆರ್ ನಿಂದ ಅನುಮೋದನೆಗಾಗಿ ದಾಖಲೆಗಳನ್ನು ಕಳಿಸಿದ್ದೇವೆ” ಎಂದು ವಿವಿಯ ವೈಸ್ ಚಾನ್ಸೆಲರ್ ಚಿರಂಜಿಬ್ ಭಟ್ಟಾಚಾರ್ಯ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...