alex Certify ಪುಟ್ಟ ಮಕ್ಕಳನ್ನು 4 ನೇ ಮಹಡಿಯಿಂದ ಕೆಳಗೆಸೆದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಕ್ಕಳನ್ನು 4 ನೇ ಮಹಡಿಯಿಂದ ಕೆಳಗೆಸೆದ ಪಾಪಿ

ದುರುಳನೊಬ್ಬ ಎರಡು ಮಕ್ಕಳನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ವಿಲಕ್ಷಣ ಘಟನೆಯೊಂದು ಕೊಲ್ಕತ್ತಾದಲ್ಲಿ ನಡೆದಿದೆ.

ಸೆಂಟ್ರಲ್ ಕೊಲ್ಕತ್ತಾದ ಬುರ್ರಬಜಾರ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದ್ದು, ಕೆಳಗೆ ತಳ್ಳಲ್ಪಟ್ಟ ಎರಡು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಇಹಲೋಕ ತ್ಯಜಿಸಿದ, ಆರು ವರ್ಷದ ಮತ್ತೊಬ್ಬ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

55 ವರ್ಷದ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.‌ ಪ್ರಾಥಮಿಕ ಮಾಹಿತಿಗಳ ಪ್ರಕಾರ ಮೃತಪಟ್ಟ ಬಾಲಕನ ತಂದೆಯೊಂದಿಗೆ ಆರೋಪಿ ಕೆಲದಿನಗಳ ಹಿಂದೆ ಜಗಳವಾಡಿದ್ದ. ಇದೊಂದು ಕೌಟುಂಬಿಕ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...