alex Certify ಪುಸ್ತಕದ ಕಪಾಟಾಗಿ ಬದಲಾಯ್ತು ರೆಫ್ರಿಜರೇಟರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಸ್ತಕದ ಕಪಾಟಾಗಿ ಬದಲಾಯ್ತು ರೆಫ್ರಿಜರೇಟರ್​..!

ಕೊಲ್ಕತ್ತಾದಲ್ಲಿ ಪುಸ್ತಕ ಮಳಿಗೆಗೆ ಬರಗಾಲವಿಲ್ಲ. ಈಗಾಗಲೇ ಸಾಕಷ್ಟು ಪುಸ್ತಕ ಮಳಿಗೆಗಳು ಕೊಲ್ಕತ್ತಾದ ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತಿದೆ. ಇದೀಗ ಈ ಪುಸ್ತಕ ಭಂಡಾರದ ಸಂಗ್ರಹವನ್ನ ಹೆಚ್ಚಿಸುವ ಸಲುವಾಗಿ ಕೊಲ್ಕತ್ತಾದ ದಂಪತಿ ಹೊಸ ಮಾರ್ಗವೊಂದನ್ನ ಕಂಡುಕೊಂಡಿದ್ದಾರೆ.

ಕಿರಾಣಿ ಅಂಗಡಿಯೊಂದಿಗೆ ಸಂಯೋಜನೆ ಮಾಡಿಕೊಂಡ ಕಾಳಿದಾಸ್​ ಹಲ್ದಾರ್​ ಹಾಗೂ ಕುಂಕುಮ್​ ಹಲ್ದಾರ್​ ದಂಪತಿ ಫ್ರಿಡ್ಜ್​​ನ್ನು ಪುಸ್ತಕದ ಕಪಾಟನ್ನಾಗಿ ಬದಲಾಯಿಸಿದ್ದಾರೆ. ಈ ಮಿನಿ ಪುಸ್ತಕ ಮಳಿಗೆಯು ತಾರಾಪೋಢ್​​ ಕಹರ್​ ಕಿರಾಣಿ ಅಂಗಡಿಯ ಎದುರಿಗಿದೆ.

ಗ್ರಂಥಾಲಯ ತೆರೆಯೋದ್ರ ಬಗ್ಗೆ ಕಹರ್​​​ ಜೊತೆ ಮಾತನಾಡಿದ ವೇಳೆ ಜಾಗವನ್ನ ನೀಡಲು ಒಪ್ಪಿಗೆ ನೀಡಿದ್ರು. ಫ್ರಿಡ್ಜ್​ ಬಾಗಿಲಿಗೆ ತಿಂಗಳಿಗೆ ಒಂದು ಪುಸ್ತಕ ಓದುವ ಮೂಲಕ ವೈದ್ಯರನ್ನ ದೂರವಿಡಿ. ಅಲ್ಲದೇ ಪುಸ್ತಕವನ್ನ ಉಚಿತವಾಗಿ ಪಡೆದ ಒಂದು ತಿಂಗಳ ಬಳಿಕ ಹಿಂದಿರಿಗುಸವಂತೆ ಬರೆಯಲಾಗಿದೆ. ಈ ವಿನೂತನ ಪ್ರಯತ್ನದ ಮೂಲಕ ಹಲ್ದಾರ್​ ದಂಪತಿ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾದ ಮೆಚ್ಚುಗೆಗೆ ಪಾತ್ರರಾಗ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...