ಕೊಲ್ಕತ್ತಾದಲ್ಲಿ ಪುಸ್ತಕ ಮಳಿಗೆಗೆ ಬರಗಾಲವಿಲ್ಲ. ಈಗಾಗಲೇ ಸಾಕಷ್ಟು ಪುಸ್ತಕ ಮಳಿಗೆಗಳು ಕೊಲ್ಕತ್ತಾದ ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತಿದೆ. ಇದೀಗ ಈ ಪುಸ್ತಕ ಭಂಡಾರದ ಸಂಗ್ರಹವನ್ನ ಹೆಚ್ಚಿಸುವ ಸಲುವಾಗಿ ಕೊಲ್ಕತ್ತಾದ ದಂಪತಿ ಹೊಸ ಮಾರ್ಗವೊಂದನ್ನ ಕಂಡುಕೊಂಡಿದ್ದಾರೆ.
ಕಿರಾಣಿ ಅಂಗಡಿಯೊಂದಿಗೆ ಸಂಯೋಜನೆ ಮಾಡಿಕೊಂಡ ಕಾಳಿದಾಸ್ ಹಲ್ದಾರ್ ಹಾಗೂ ಕುಂಕುಮ್ ಹಲ್ದಾರ್ ದಂಪತಿ ಫ್ರಿಡ್ಜ್ನ್ನು ಪುಸ್ತಕದ ಕಪಾಟನ್ನಾಗಿ ಬದಲಾಯಿಸಿದ್ದಾರೆ. ಈ ಮಿನಿ ಪುಸ್ತಕ ಮಳಿಗೆಯು ತಾರಾಪೋಢ್ ಕಹರ್ ಕಿರಾಣಿ ಅಂಗಡಿಯ ಎದುರಿಗಿದೆ.
ಗ್ರಂಥಾಲಯ ತೆರೆಯೋದ್ರ ಬಗ್ಗೆ ಕಹರ್ ಜೊತೆ ಮಾತನಾಡಿದ ವೇಳೆ ಜಾಗವನ್ನ ನೀಡಲು ಒಪ್ಪಿಗೆ ನೀಡಿದ್ರು. ಫ್ರಿಡ್ಜ್ ಬಾಗಿಲಿಗೆ ತಿಂಗಳಿಗೆ ಒಂದು ಪುಸ್ತಕ ಓದುವ ಮೂಲಕ ವೈದ್ಯರನ್ನ ದೂರವಿಡಿ. ಅಲ್ಲದೇ ಪುಸ್ತಕವನ್ನ ಉಚಿತವಾಗಿ ಪಡೆದ ಒಂದು ತಿಂಗಳ ಬಳಿಕ ಹಿಂದಿರಿಗುಸವಂತೆ ಬರೆಯಲಾಗಿದೆ. ಈ ವಿನೂತನ ಪ್ರಯತ್ನದ ಮೂಲಕ ಹಲ್ದಾರ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾದ ಮೆಚ್ಚುಗೆಗೆ ಪಾತ್ರರಾಗ್ತಿದ್ದಾರೆ.