alex Certify ಅಸಲಿಯತ್ತು ಗೊತ್ತಾಗಿ ಲವ್ ಬ್ರೇಕ್ ಅಪ್, ವಿದ್ಯಾರ್ಥಿನಿ ಮನೆಗೆ ಬಂದ ಪ್ರಿಯಕರನಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಲಿಯತ್ತು ಗೊತ್ತಾಗಿ ಲವ್ ಬ್ರೇಕ್ ಅಪ್, ವಿದ್ಯಾರ್ಥಿನಿ ಮನೆಗೆ ಬಂದ ಪ್ರಿಯಕರನಿಂದಲೇ ಘೋರ ಕೃತ್ಯ

ಕೊಲ್ಕೊತ್ತಾ: ದಕ್ಷಿಣ ಕೊಲ್ಕತ್ತಾದ ರೀಜೆಂಟ್ ಪಾರ್ಕ್ ಏರಿಯಾದ ಆನಂದಪಲ್ಲಿ ಪ್ರದೇಶದಲ್ಲಿ ಮಾಜಿ ಪ್ರಿಯಕರನೇ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ.

ಪ್ರಿಯಾಂಕಾ ಕೊಲೆಯಾದ ಯುವತಿ. ಕೋಲ್ಕತ್ತಾದ ಕ್ರಿಶ್ಚಿಯನ್ ಮಹಿಳಾ ಕಾಲೇಜಿನಲ್ಲಿ ತೃತೀಯ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಪ್ರಿಯಾಂಕಾಳನ್ನು ಆಕೆಯ ಮನೆಯ ಸಮೀಪದಲ್ಲೇ ವಾಸವಾಗಿದ್ದ ಜಯಂತ ಹಾಲ್ದಾರ್ ಪ್ರೀತಿಸುತ್ತಿದ್ದ.

ಜಯಂತನಿಗೆ ಈ ಮೊದಲೇ ಮದುವೆಯಾಗಿರುವ ವಿಚಾರ ಪ್ರಿಯಾಂಕಾಗೆ ಗೊತ್ತಾಗಿ ಆತನಿಂದ ದೂರವಾಗಿದ್ದಾಳೆ. ಇದರಿಂದ ಆಕ್ರೋಶಗೊಂಡ ಆರೋಪಿ ಪ್ರಿಯಾಂಕಾ ಮನೆಗೆ ನುಗ್ಗಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...