ರಸ್ತೆ ಮೇಲೆ ಯುವಕನ ಪ್ರೇಮ ಪತ್ರ..! ಇದರ ಉದ್ದ ಬರೋಬ್ಬರಿ 2.5 ಕಿ.ಮೀ. 27-03-2021 12:53PM IST / No Comments / Posted In: Latest News, India ಪ್ರೇಮ ನಿವೇದನೆ ಮಾಡೋಕೆ ಕೆಲವರು ಇನ್ನಿಲ್ಲದ ಸರ್ಕಸ್ ಮಾಡ್ತಾರೆ. ಅದೇ ರೀತಿ ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿಯೊಬ್ಬ ತನ್ನ ಗರ್ಲ್ಫ್ರೆಂಡ್ಗಾಗಿ 2.5 ಕಿಲೋಮೀಟರ್ ದೂರದ ರಸ್ತೆಯುದ್ದಕ್ಕೂ ಐ ಲವ್ ಯೂ & ಐ ಮಿಸ್ ಯೂ ಎಂದು ಪೇಂಟಿಂಗ್ ಮಾಡುತ್ತಲೇ ಹೋಗಿದ್ದಾನೆ, ಒಂದು ಕಡೆಯಂತೂ ಈತ ಐ ಮಿಸ್ ಯೂ ಝಿಂದಗಿ ಕೆ ಸಾಥ್ ಭಿ, ಝಿಂದಗಿ ಕೆ ಬಾದ್ ಭಿ ( ಜೀವನದ ಜೊತೆಯೂ ಜೀವನದ ನಂತರವೂ ) ಎಂಬ ಎಲ್ಐಸಿ ಟ್ಯಾಗ್ಲೈನ್ನ್ನು ಪೇಂಟ್ ಮಾಡಿದ್ದಾನೆ. ಕೊಲ್ಹಾಪುರ ಜಿಲ್ಲೆಯ ಧಾರಗುಟ್ಟಿ ಗ್ರಾಮದ ರಸ್ತೆಯ ಮೇಲೆ ಬರೆಯಲಾದ ಈ ಪೇಟಿಂಗ್ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ರಾತ್ರಿ ಬೆಳಗಾಗೋದ್ರಲ್ಲಿ ರಸ್ತೆಯ ಮೇಲೆ ಮೂಡಿದ ಈ ಚಿತ್ರಣ ಕಂಡು ಗ್ರಾಮಸ್ಥರು ಶಾಕ್ ಆಗಿದ್ದಾರೆ. 2.5 ಕಿಲೋಮೀಟರ್ ರಸ್ತೆಯಲ್ಲಿ ಯಾರು ಈ ಕೃತ್ಯವನ್ನ ಎಸಗಿದ್ದಾರೆ ಅನ್ನೋದು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಪೊಲೀಸರು ಇದು ಸ್ಥಳೀಯ ಯುವಕರ ಕೃತ್ಯ ಇರಬಹುದೆಂದು ಶಂಕಿಸಿದ್ದಾರೆ.