alex Certify ಕುತ್ತಿಗೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತ್ತಿಗೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…!

ಭೋಪಾಲ್: ವ್ಯಕ್ತಿಯೊಬ್ಬನ ಅನ್ನ ನಾಳದಲ್ಲಿದ್ದ 14 ಸೆಂ.ಮೀ. ಉದ್ದದ, 3.5 ಸೆಂ.ಮೀ ಅಗಲದ ಚಾಕುವನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ.

ಭೋಪಾಲ್ ನ ಎಐಐಎಂಎಸ್ ಆಸ್ಪತ್ರೆಯ ವೈದ್ಯರ ತಂಡ ಈ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಕೈಗೊಂಡು ಚಹತಾಪುರದ 32 ವರ್ಷದ ವ್ಯಕ್ತಿಯ ಜೀವ ಉಳಿಸಿದೆ.

ಅಪಹರಣಕ್ಕೀಡಾದವನಿಂದಲೂ ಕ್ವಾರಂಟೈನ್ ಉಲ್ಲಂಘನೆಯ ದಂಡ ಪೀಕಿದ ಪೊಲೀಸರು

ವ್ಯಕ್ತಿ ಮನೋ ರೋಗಿಯಾಗಿದ್ದು, ತಿಂಡಿಯ ಜತೆ ಸಿಕ್ಕ ಇತರ ವಸ್ತುಗಳನ್ನು ನುಂಗಿಬಿಡುವ ಅಭ್ಯಾಸ ಹೊಂದಿದ್ದ. ಈ ಹಿಂದೆಯೂ ಹೊಟ್ಟೆಯಿಂದ ವಸ್ತುವನ್ನು ಹೊರ‌ ತೆಗೆಯಲಾಗಿತ್ತು. ಈಗ ಎಕ್ಸರೇ ಮಾಡಿದಾಗ ಕುತ್ತಿಗೆ ಭಾಗದಲ್ಲಿ ಚಾಕು ಹಾಗೂ ಹೊಟ್ಟೆಯಲ್ಲಿ ಪೆನ್ ನ ರಿಫಿಲ್ ಕಂಡುಬಂದಿತ್ತು. ಎಂಡೊಸ್ಕೋಪಿ ಮಾಡಿ ರಿಫೀಲ್ ಹೊರ ತೆಗೆಯಲಾಯಿತು. ನಂತರ ಎಐಐಎಂಎಸ್ ನ ಹೆಚ್ಚುವರಿ ಪ್ರೊಫೆಸರ್ ಡಾ. ವಿಕಾಸ್ ಗುಪ್ತಾ ಅವರ ನೇತೃತ್ವದ ತಂಡ ಈ ಶಸ್ತ್ರ ಚಿಕಿತ್ಸೆ ಮಾಡಿದೆ.

ಕಳೆದ ಐದಾರು ತಿಂಗಳಲ್ಲಿ ಆತ ಹಲವು ವಸ್ತುಗಳನ್ನು ನುಂಗಿದ್ದ. ಹೊಟ್ಟೆಯಲ್ಲಿ ಇನ್ನೊಂದು ವಸ್ತು ಕಂಡುಬಂದಿದ್ದು, ಕೆಲ ದಿನಗಳಲ್ಲಿ ಇನ್ನೊಂದು ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...