ಬಾಲಿವುಡ್ ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಕಿರಣ್ ಪತಿ ಹಿರಿಯ ನಟ ಅನುಪಮ್ ಖೇರ್ ಮಾಹಿತಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನ ಶೇರ್ ಮಾಡಿರುವ ನಟ ಅನುಪಮ್ ಖೇರ್, ತಮ್ಮ ಪತ್ನಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುವ ದಾರಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ವದಂತಿಗಳು ಪರಿಸ್ಥಿತಿಯನ್ನ ಸುಧಾರಿಸೋದಿಲ್ಲ. ನಾನು ಹಾಗೂ ನನ್ನ ಪುತ್ರ ಸಿಕಂದರ್ ಹೇಳೋದೇನೆಂದರೆ ನನ್ನ ಪತ್ನಿ ಮಲ್ಟಿಪಲ್ ಮೈಲೋಮಾದಿಂದ ಬಳಲುತ್ತಿದ್ದಾರೆ. ಇದೊಂದು ಬಗೆಯ ಬ್ಲಡ್ ಕ್ಯಾನ್ಸರ್ ಆಗಿದೆ. ಆಕೆ ಈಗಾಗಲೇ ಚಿಕಿತ್ಸೆಯನ್ನ ಪಡೆಯುತ್ತಿದ್ದಾಳೆ. ಆಕೆ ಮೊದಲಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗುತ್ತಾಳೆ ಎಂಬ ನಂಬಿಕೆ ಇದೆ ಎಂದು ಬರೆದಿದ್ದಾರೆ.
ಇದೇ ವೇಳೆ ಪತ್ನಿ ಕಿರಣ್ ಖೇರ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಗುಂಪನ್ನ ಅನುಪಮ್ ಖೇರ್ ಅಸಾಧಾರಣ ವ್ಯಕ್ತಿತ್ವ ಎಂದು ಹಾಡಿ ಹೊಗಳಿದ್ದಾರೆ. ಅಪೂರ್ವ ವೈದ್ಯರ ಗುಂಪು ಆಕೆಯನ್ನ ನೋಡಿಕೊಳ್ಳುತ್ತಿದೆ. ಇಂತಹ ವೈದ್ಯರನ್ನ ಪಡೆದ ನಾವೇ ಧನ್ಯರು. ಆಕೆ ಹೋರಾಟಗಾರ್ತಿ ಎಂದು ಹೇಳಿದ್ದಾರೆ.
ಇದೇ ವೇಳೆ ಕಿರಣ್ ಖೇರ್ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿರುವ ಹಿತೈಷಿಗಳಿಗೂ ಅನುಪಮ್ ಖೇರ್ ಧನ್ಯವಾದ ಅರ್ಪಿಸಿದ್ದಾರೆ.
https://www.instagram.com/p/CNHPkDxMihf/?utm_source=ig_web_copy_link