alex Certify ಮನ ಮಿಡಿಯುತ್ತೆ ಮಹಿಳೆ ಮಾಡಿದ ಈ ಸಹಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಮಿಡಿಯುತ್ತೆ ಮಹಿಳೆ ಮಾಡಿದ ಈ ಸಹಾಯ…!

ತಿರುವನಂತಪುರಂ: ಅಂಧನೊಬ್ಬನಿಗೆ ಮಹಿಳೆಯೊಬ್ಬರು ಸಹಾಯ ಮಾಡಿದ ಕೇರಳದ ವಿಡಿಯೋ ವೈರಲ್ ಆಗಿದೆ.‌
ಕೇರಳ ಸಾರಿಗೆ ಸಂಸ್ಥೆ ಬಸ್ ಹೊರಟು ನಿಂತಿತ್ತು. ಅದಕ್ಕೆ ಹತ್ತಬೇಕಾದ ಅಂಧರೊಬ್ಬರು ತುಂಬ ಹಿಂದೆಯೇ ಉಳಿದು ಬಿಟ್ಟಿದ್ದರು.

ಬಸ್ ಹತ್ತಲು ವೇಗವಾಗಿ ಬರಲು ಕಷ್ಟಪಡುತ್ತಿದ್ದರು. ಅದನ್ನು ಕಂಡ ಅದೇ ಮಾರ್ಗದಲ್ಲಿ ಬರುತ್ತಿದ್ದ ಕಿತ್ತಳೆ ಬಣ್ಣದ ಸೀರೆ ಉಟ್ಟ ಮಹಿಳೆ ಓಡಿ ಬಂದು ಕಂಡಕ್ಟರ್ ಕರೆದು ಬಸ್ ನಿಲ್ಲಿಸಲು ಹೇಳುತ್ತಾರೆ.

ನಂತರ ವಾಪಸ್ ಹೋಗಿ ಅಂಧನ ಕೈ ಹಿಡಿದು ಕರೆತಂದು ಬಸ್ ಹತ್ತಿಸುತ್ತಾರೆ‌. ಆ ಸನ್ನಿವೇಶವನ್ನು ಕಟ್ಟಡವೊಂದರ ಮೇಲಿಂದ ವಿಡಿಯೋ ಮಾಡಿ ಹರಿ ಬಿಡಲಾಗಿದೆ.

ಐಪಿಎಸ್ ಅಧಿಕಾರಿ ವಿಜಯಕುಮಾರ್ ಎಂಬುವವರು, ಇದನ್ನು ಟ್ವಿಟರ್ ಗೆ ಅಪ್ಲೋಡ್ ಮಾಡಿದ್ದಾರೆ. “ಈ ಮಹಿಳೆ ಜಗತ್ತನ್ನು ಜೀವಿಸಲು ಉತ್ತಮ‌ ತಾಣವಾಗಿ ಮಾಡಿದ್ದಾರೆ. ದಯೆ ಎಷ್ಟು ಉತ್ತಮ” ಎಂದು ಬರೆದಿದ್ದಾರೆ.

ವಿಡಿಯೋವನ್ನು 4.8 ಮಿಲಿಯನ್ ಜನರು ವೀಕ್ಷಿಸಿದ್ದು, 55 ಸಾವಿರ ಜನ ಲೈಕ್ ಮಾಡಿದ್ದಾರೆ. 10 ಸಾವಿರಕ್ಕೂ ಅಧಿಕ ರೀ ಟ್ವೀಟ್ ಆಗಿದೆ. “ಇಂಥವರಿಂದಲೇ ಇಂದಿಗೂ ಜಗತ್ತು ಉತ್ತಮವಾಗಿದೆ” ಎಂದು ಒಬ್ಬರು, “ಇಂಥವರು ಇಂದು ಸಿಗುವುದು ಅಪರೂಪ” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...