alex Certify ಸಾಲಬಾಧೆ ತಾಳಲಾರದೇ ಕಿಡ್ನಿ ಮಾರಾಟಕ್ಕೆ ಮುಂದಾದ ವ್ಯಾಪಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲಬಾಧೆ ತಾಳಲಾರದೇ ಕಿಡ್ನಿ ಮಾರಾಟಕ್ಕೆ ಮುಂದಾದ ವ್ಯಾಪಾರಿ…!

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಕಾಶ್ಮೀರದ ಖಾಜಿಗುಂಡ್​​ನ 28 ವರ್ಷದ ಕಾರು ವ್ಯಾಪಾರಿ ತನ್ನ ಮೂತ್ರಪಿಂಡವನ್ನ ಮಾರಾಟಕ್ಕೆ ಇಟ್ಟಿದ್ದಾನೆ. ಅಂದಹಾಗೆ ಈ ವ್ಯಕ್ತಿ ಬರೋಬ್ಬರಿ 91 ಲಕ್ಷ ರೂಪಾಯಿ ಸಾಲ ಮಾಡಿದ್ದಾನಂತೆ.

ಕುಲ್ಗಂ ಜಿಲ್ಲೆಯ ಖಾಜಿಗುಂಡ್​ನ ನುಸು ಗ್ರಾಮದ ನಿವಾಸಿ ಸಬ್ಜಾರ್​ ಅಹ್ಮದ್​ ಖಾನ್​​, ಶ್ರೀನಗರ ಮೂಲದ ಕಾಶ್ಮೀರ ರೀಡರ್​ ಪತ್ರಿಕೆಯಲ್ಲಿ ಕಿಡ್ನಿ ಫಾರ್​ ಸೇಲ್​ ಎಂಬ ಜಾಹೀರಾತನ್ನ ಪ್ರಕಟಿಸಿದ್ದಾರೆ.

ಭಾರತೀಯ ಕಾನೂನಿನ ಪ್ರಕಾರ ಇಂತಹ ಜಾಹೀರಾತನ್ನ ನೀಡೋದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ ಸಾಲ ಭಾದೆ ತಾಳಲಾರದೇ ಸಬ್ಜಾರ್​ ಈ ರೀತಿ ಜಾಹೀರಾತನ್ನ ನೀಡಿದ್ದಾರಂತೆ.

ನಾನು ಮೂತ್ರಪಿಂಡಗಳನ್ನ ಮಾರಾಟ ಮಾಡಲು ಸಿದ್ಧನಿದ್ದೇನೆ. ಏಕೆಂದರೆ ನಾನು ನನ್ನ ವ್ಯವಹಾರದಲ್ಲಿ ಎಲ್ಲವನ್ನ ಕಳೆದುಕೊಂಡಿದ್ದೇನೆ. ಆದರೆ ನನಗೆ ಇನ್ನೂ 91 ಲಕ್ಷ ರೂಪಾಯಿ ಪಾವತಿ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮೂತ್ರಪಿಂಡದ ಅಗತ್ಯವಿರುವ ಯಾರಾದರೂ ನನ್ನ ಸಂಪರ್ಕ ಮಾಡಿ ಎಂದು ಜಾಹೀರಾತನ್ನ ಪ್ರಕಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...