alex Certify ಆಂಬುಲೆನ್ಸ್​ನಲ್ಲಿ ಕೂತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಕೊರೊನಾ ಸೋಂಕಿತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಬುಲೆನ್ಸ್​ನಲ್ಲಿ ಕೂತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಕೊರೊನಾ ಸೋಂಕಿತೆ..!

ಆಂಬುಲೆನ್ಸ್ ಒಳಕ್ಕೆ ಕೂತು ಪಿಎಸ್​ಸಿ ಪರೀಕ್ಷೆ ಎದುರಿಸುವ ಮೂಲಕ ಕೇರಳದ ತಿರುವನಂತಪುರದಲ್ಲಿ ಯುವತಿಯೊಬ್ಬರು ಸಾಧನೆ ಮಾಡಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ ನಡೆಸುವ ಪಿಎಸ್​ಸಿ ಪರೀಕ್ಷೆಗೆ ಕಠಿಣ ಅಭ್ಯಾಸ ನಡೆಸಿದ್ದ ಗೋಪಿಕಾ ಗೋಪನ್​ಗೆ ಶನಿವಾರ ಕೊರೊನಾ ಸೋಂಕು ದೃಢಪಟ್ಟಿತ್ತು.

ಆದರೂ ಪಣ ಬಿಡದ ಗೋಪಿಕಾ ಅನಾರೋಗ್ಯದ ನಡುವೆಯೂ ಪರೀಕ್ಷೆ ಎದುರಿಸುವ ನಿರ್ಧಾರ ಕೈಗೊಂಡಿದ್ದಾರೆ. ಕೇರಳ ಸಾರ್ವಜನಿಕ ಸೇವಾ ಆಯೋಗ ನಡೆಸಿದ ಈ ಪರೀಕ್ಷೆಯನ್ನ ಗೋಪಿಕಾ ಆಂಬುಲೆನ್ಸ್ ಒಳಕ್ಕೆ ಕೂತು ಬರೆದಿದ್ದಾರೆ.

ಇನ್ನು ಈ ವಿಚಾರವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಸಂಸದ ಶಶಿ ತರೂರ್​ ಧೈರ್ಯಶಾಲಿ ಗೋಪಿಕಾಗೆ ನನ್ನ ನಮನ ಎಂದು ಬರೆದಿದ್ದಾರೆ. ಜುಲೈ ತಿಂಗಳಲ್ಲಿ ನಿಗದಿಯಾಗಿದ್ದ ಈ ಪರೀಕ್ಷೆಯನ್ನ ಕೊರೊನಾ ಕಾರಣದಿಂದಾಗಿ ಕೇರಳ ಸರ್ಕಾರ ಮುಂದೂಡಿತ್ತು.

— Shashi Tharoor (@ShashiTharoor) November 3, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...