
ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ ನಡೆಸುವ ಪಿಎಸ್ಸಿ ಪರೀಕ್ಷೆಗೆ ಕಠಿಣ ಅಭ್ಯಾಸ ನಡೆಸಿದ್ದ ಗೋಪಿಕಾ ಗೋಪನ್ಗೆ ಶನಿವಾರ ಕೊರೊನಾ ಸೋಂಕು ದೃಢಪಟ್ಟಿತ್ತು.
ಆದರೂ ಪಣ ಬಿಡದ ಗೋಪಿಕಾ ಅನಾರೋಗ್ಯದ ನಡುವೆಯೂ ಪರೀಕ್ಷೆ ಎದುರಿಸುವ ನಿರ್ಧಾರ ಕೈಗೊಂಡಿದ್ದಾರೆ. ಕೇರಳ ಸಾರ್ವಜನಿಕ ಸೇವಾ ಆಯೋಗ ನಡೆಸಿದ ಈ ಪರೀಕ್ಷೆಯನ್ನ ಗೋಪಿಕಾ ಆಂಬುಲೆನ್ಸ್ ಒಳಕ್ಕೆ ಕೂತು ಬರೆದಿದ್ದಾರೆ.
ಇನ್ನು ಈ ವಿಚಾರವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಸಂಸದ ಶಶಿ ತರೂರ್ ಧೈರ್ಯಶಾಲಿ ಗೋಪಿಕಾಗೆ ನನ್ನ ನಮನ ಎಂದು ಬರೆದಿದ್ದಾರೆ. ಜುಲೈ ತಿಂಗಳಲ್ಲಿ ನಿಗದಿಯಾಗಿದ್ದ ಈ ಪರೀಕ್ಷೆಯನ್ನ ಕೊರೊನಾ ಕಾರಣದಿಂದಾಗಿ ಕೇರಳ ಸರ್ಕಾರ ಮುಂದೂಡಿತ್ತು.