ಕೋವಿಡ್ 19 ಸಾಂಕ್ರಾಮಿಕ ಬಂದೆರೆಗಿದಾಗಿನಿಂದ ಮಾಸ್ಕ್ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಇದೇ ವಿಚಾರವನ್ನ ಗಮನದಲ್ಲಿರಿಸಿ ಕೇರಳದ ವಿದ್ಯಾರ್ಥಿಯೊಬ್ಬರು ಮುಂಚೂಣಿ ಕಾರ್ಯಕರ್ತರು ಹಾಗೂ ವೈದ್ಯಲೋಕದ ಸಿಬ್ಬಂದಿಗೆಂದೇ ವಿಶೇಷ ಮಾಸ್ಕ್ ಒಂದನ್ನ ಸಿದ್ಧಪಡಿಸಿದ್ದಾರೆ.
ಬಿ ಟೆಕ್ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಕೆವಿನ್ ಜ್ಯಾಕೋಬ್, ಮೈಕ್ ಹಾಗೂ ಸ್ಪೀಕರ್ನ್ನು ಹೊಂದಿರುವ ಮಾಸ್ಕ್ನ್ನು ಕಂಡುಹಿಡಿದಿದ್ದಾರೆ. ಪಿಪಿಇ ಕಿಟ್ ಧರಿಸಿದ ನಂತರ ಪರಸ್ಪರ ಸಂವಹನ ನಡೆಸೋದು ಕಷ್ಟವಾಗಿರೋದ್ರಿಂದ ಮಾಸ್ಕ್ಗೆ ಸ್ಪೀಕರ್ ಹಾಗೂ ಮೈಕ್ನ್ನು ಅಳವಡಿಸಲಾಗಿದೆ. ಕೆವಿನ್ರ ತಂದೆ – ತಾಯಿ ವೈದ್ಯರಾಗಿದ್ದು ರೋಗಿಗಳ ಜೊತೆ ಸಂವಹನ ನಡೆಸೋದು ಕಷ್ಟವಾಗ್ತಿರೋದ್ರ ಬಗ್ಗೆ ಹೇಳಿಕೊಂಡಿದ್ದರಿಂದ ಈ ಅನ್ವೇಷಣೆಯನ್ನ ಮಾಡಿದ್ದಾರೆ.
ಆಯಸ್ಕಾಂತದ ಸಹಾಯದಿಂದ ಮೈಕ್ ಹಾಗೂ ಸ್ಪೀಕರ್ನ್ನು ಮಾಸ್ಕ್ಗೆ ಅಳವಡಿಸಲಾಗಿದೆ. ಮೂವತ್ತು ನಿಮಿಷಗಳ ಕಾಲ ಇದನ್ನ ಚಾರ್ಜ್ ಮಾಡಿದ್ರೆ ಸಾಕು 6-7 ಗಂಟೆಗಳ ಕಾಲ ಬಳಕೆ ಮಾಡಬಹುದು.
ಇದೀಗ ಕೆವಿನ್ರ ಈ ವಿನೂತನ ಮಾಸ್ಕ್ಗೆ ಬೇಡಿಕೆ ಹೆಚ್ಚಾಗಿದೆ. ಕೆವಿನ್ರ ಪೋಷಕರು ಸೇರಿದಂತೆ ಸಾಕಷ್ಟು ವೈದ್ಯರು ಈ ಮಾಸ್ಕ್ನ್ನೇ ಬಳಕೆ ಮಾಡುತ್ತಿದ್ದಾರಂತೆ. ಈಗಾಗಲೇ 50ಕ್ಕೂ ಹೆಚ್ಚು ಮಾಸ್ಕ್ಗಳನ್ನ ಮಾರಾಟ ಮಾಡಿರುವ ಕೆವಿನ್ ದೊಡ್ಡ ಕಂಪನಿಗಳ ಜೊತೆ ಒಡಂಬಡಿಕೆಗಾಗಿ ಕಾಯುತ್ತಿದ್ದಾರೆ.