ದೇಶಾದ್ಯಂತ ಇಂಧನ ಬೆಲೆ ಹೆಚ್ಚಾಗಿರುವ ನಡುವೆಯೇ ಕೇರಳದ ಪುಟ್ಟ ಗ್ರಾಮವೊಂದರಲ್ಲಿರುವ ಪೆಟ್ರೋಲ್ ಪಂಪ್ ಒಂದು ಆಟೋ ರಿಕ್ಷಾಗಳಿಗೆ ಸೋಮವಾರದಂದು ತಲಾ ಮೂರು ಲೀಟರ್ ಇಂಧನ ಉಚಿತವಾಗಿ ನೀಡುತ್ತಿದೆ.
ಕಾಸರಗೋಡಿನ ಪೆರ್ಲಾದ ಕುಡುಕೋಳಿಯಲ್ಲಿರುವ ಪಂಪ್ ಹೀಗೆ ಸೋಮವಾರ ಬೆಳಿಗ್ಗೆ 6:30ರಿಂದ ಉಚಿತವಾಗಿ ಪೆಟ್ರೋಲ್ ವಿತರಿಸಿದೆ. ಕರ್ನಾಟಕದ ಸರಡ್ಕದಿಂದ 5ಕಿಮೀ ದೂರದಲ್ಲಿರುವ ಈ ಊರಿನ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ 64ರ ಬಳಿ ಈ ಪಂಪ್ ಇದೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬರೋಬ್ಬರಿ ಎರಡು ತಿಂಗಳ ನಂತ್ರ ಸಂಚಾರ ಪುನಾರಂಭ
ಪೆಟ್ರೋಲ್‌ಗೆ 97.70 ರೂ./ಲೀ ಹಾಗೂ ಡೀಸೆಲ್‌ಗೆ 93.11 ರೂ./ಲೀ ಬೆಲೆ ಇರುವ ದಿನದಂದು, 313 ಆಟೋರಿಕ್ಷಾಗಳಿಗೆ ತಲಾ ಮೂರು ಲೀಟರ್ ಉಚಿತವಾಗಿ ಕೊಟ್ಟ ಪಂಪ್‌ಗೆ ಈ ನಡೆಯಿಂದ ಸುಮಾರು ಒಂದು ಲಕ್ಷ ರೂ.ನಷ್ಟು ಹೊರೆ ಬಿದ್ದಿದೆ.
ಕರ್ನಾಟಕದ ಬಳಿಕ ಈ ರಾಜ್ಯದಲ್ಲೂ ಈಗ ಶುರುವಾಗಿದೆ ಟಿಪ್ಪು ಸುಲ್ತಾನ್ ವಿವಾದ..!
ಅಬುಧಾಬಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಬ್ದುಲ್ಲಾ ಮಾಲೀಕತ್ವದ ಈ ಪಂಪ್‌ನಲ್ಲಿ ಆಟೋ ರಿಕ್ಷಾ ಚಾಲಕರ ಮೇಲೆ ಕೋವಿಡ್ ಲಾಕ್‌ಡೌನ್ ಹೊರೆ ಇಳಿಸಲೆಂದು ಹೀಗೆ ಇಂಧನವನ್ನು ಉಚಿತವಾಗಿ ನೀಡಲಾಗಿದೆ.