
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ, ಬಾಬುರಾಜು, ಬಿನು ಎಂಬ ವ್ಯಕ್ತಿಯ ಪಕ್ಕದಲ್ಲೇ ನಿಂತಿದ್ದರು. ಇವರಿಬ್ಬರು ಕೇರಳ ಬ್ಯಾಂಕ್ನ ವಾದಕರ ಶಾಖೆಯ ಸಿಬ್ಬಂದಿಯಾಗಿದ್ದಾರೆ. ತಮ್ಮ ಪ್ರಾವಿಡೆಂಟ್ ಫಂಡ್ನ್ನು ಪಾವತಿ ಮಾಡಲು ಇವರಿಬ್ಬರು ತಮ್ಮ ಸರದಿಯಾಗಿ ಕಾಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಸಿಸಿ ಟಿವಿ ದೃಶ್ಯಾವಳಿಯಲ್ಲಿ ಬಿನು ಆಯತಪ್ಪಿ ಬೀಳುತ್ತಿರೋದನ್ನ ನೀವು ಕಾಣಬಹುದಾಗಿದೆ. ಬಿನು ಪಕ್ಕದಲ್ಲೇ ನಿಂತಿದ್ದ ಬಾಬುರಾಜ್ ಬಿನು ಕಾಲನ್ನ ಹಿಡಿದುಕೊಂಡು ಅವರು ಕಟ್ಟಡದಿಂದ ಕೆಳಗೆ ಬೀಳೋದ್ರಿಂದ ತಪ್ಪಿಸಿದ್ದಾರೆ. ಕೂಡಲೇ ಅಲ್ಲೇ ಇದ್ದ ಇತರೆ ವ್ಯಕ್ತಿಗಳು ಹಾಗೂ ಪೊಲೀಸರು ಬಿನು ಕಾಲನ್ನ ಹಿಡಿದೆಳೆಯುವ ಮೂಲಕ ದೊಡ್ಡ ದುರಂತದಿಂದ ಬಿನುರನ್ನ ಬಚಾವ್ ಮಾಡಿದ್ದಾರೆ.