ಕೇರಳ ರಾಜ್ಯದ ಜನತೆಗೆ ಕೊರೊನಾ ವೈರಸ್ ಆತಂಕದ ನಡುವೆ ಹಕ್ಕಿ ಜ್ವರದ ಸಂಕಷ್ಟ ಶುರುವಾಗಿದೆ. ಕೊಟ್ಟಾಯಂ ಹಾಗೂ ಆಲಪ್ಪುಳ ಜಿಲ್ಲೆಗಳ ಕೆಲ ಪ್ರದೇಶದಲ್ಲಿ ಹಕ್ಕಿ ಜ್ವರ ಪತ್ತೆಯಾದ ಬಳಿಕ ಕೇರಳ ರಾಜ್ಯ ಸರ್ಕಾರ ರಾಜ್ಯ ವಿಪತ್ತು ಘೋಷಣೆ ಮಾಡಿದೆ.
ಅಲಪುಜ್ಜಾ ಜಿಲ್ಲೆಯ ನೆಡುಮುಂಡಿ, ಥಾಖಜೆ, ಪಾಲಿಪ್ಪಡ್ ಹಾಗೂ ಕರುವಾಟ್ಟಾ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಬಾತುಕೋಳಿ ಸಾಕಣೆಯಿಂದ ಈ ವೈರಸ್ ವರದಿಯಾಗಿದೆ.
ಕೊಟ್ಟಾಯಂ ಜಿಲ್ಲೆಯಲ್ಲಿರುವ ಜಮೀನಿನಲ್ಲಿ ಒಟ್ಟು 1700 ಬಾತುಕೋಳಿಗಳು ಸಾವನ್ನಪ್ಪಿವೆ. ಈ ಪಕ್ಷಿಗಳಲ್ಲಿ ವೈರಸ್ ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕುಟ್ಟನಾಡ್ ಪ್ರದೇಶದ 34000 ಸೇರಿದಂತೆ ಸುಮಾರು 40000 ಪಕ್ಷಿಗಳನ್ನ ಸಾಮೂಹಿಕವಾಗಿ ಹತ್ಯೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.