ದುಬೈನಿಂದ ಕೋಯಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್‌ವೇಯಿಂದ ಜಾರಿ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆದಿದ್ದ ಏರ್ ಇಂಡಿಯಾ ಪತನದ ಮಾದರಿಯಲ್ಲಿ ಈ ಘಟನೆ ನಡೆದಿರುವುದು ಚರ್ಚೆಗೆ ಕಾರಣವಾಗಿದೆ.
ಹೌದು, ಕೇರಳದ ಕರಿಪುರ್‌ನಲ್ಲಿರುವ ರನ್‌ವೇ ಟೇಬಲ್ ಟಾಪ್ ರನ್‌ವೇ. ಈ ರನ್‌ವೇನಲ್ಲಿ ವಿಮಾನ ಲ್ಯಾಂಡಿಂಗ್ ಮಾಡುವುದು ಸಾಹಸವೇ ಸರಿ. ಏಕೆಂದರೆ ನಿಲ್ದಾಣದ ಎರಡೂ ಬದಿ ಅಥವಾ ಒಂದು ಬದಿಯಲ್ಲಿ ಕಣಿವೆ ಇರುತ್ತದೆ. ಎತ್ತರದ ಪ್ರದೇಶದಲ್ಲಿ ರನ್‌ವೇ ಇರೋದ್ರಿಂದ ಈ ರೀತಿಯಾಗಿ ಅವಘಡಗಳು ಆಗಿದೆಯಂತೆ.
ಇನ್ನು ಈ ರನ್‌ವೇನಲ್ಲಿ ಲ್ಯಾಂಡ್ ಮಾಡುವುದೇ ದೊಡ್ಡ ಸವಾಲಿನ ಕೆಲಸವಂತೆ. ನುರಿತ ಪೈಲಟ್‌ಗಳಿಂದ ಮಾತ್ರ ಲ್ಯಾಂಡಿಂಗ್ ಮಾಡಲು ಸಾಧ್ಯವಂತೆ. ಕೆಲವೊಮ್ಮೆ ನುರಿತ ಪೈಲೆಟ್‌ಗಳಿಂದಲೂ ಯಡವಟ್ಟುಗಳು ಆಗುತ್ತವೆಯಂತೆ. ಹಾಗಾಗಿಯೇ ಇಂತಹ ರನ್‌ವೇಗಳಲ್ಲಿ ಸಮಸ್ಯೆಗಳು ಕಾಣಿಸುತ್ತವೆ.