ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕೇರಳದ ರೈತ ಸಂಘ ದೆಹಲಿಗೆ 16 ಟನ್ ಅನಾನಸ್ ಹಣ್ಣನ್ನ ಉಚಿತವಾಗಿ ಕಳುಹಿಸಿಕೊಟ್ಟಿದೆ.
ಪ್ರತಿಭಟನಾನಿರತ ರೈತರಿಗಾಗಿ ಕಳುಹಿಸಿಕೊಟ್ಟಲಾಗಿರುವ ಹಣ್ಣಿನ ಖರ್ಚು ಹಾಗೂ ಸಾರಿಗೆ ವೆಚ್ಚವನ್ನ ರೈತ ಸಂಘವೇ ಭರಿಸಲಿದೆ ಎಂದು ರೈತ ಸಂಘದ ನಾಯಕ ಜೇಮ್ಸ್ ತೊಟ್ಟುಮರಿಲ್ ಹೇಳಿದ್ದಾರೆ.
ಭಾನುವಾರ ರೈತರು 16 ಟನ್ ಅನಾನಸ್ ಹಣ್ಣನ್ನ ಕಳುಹಿಸಿಕೊಟ್ಟಿದ್ದು ಸೋಮವಾರ ಸಂಜೆ ದೆಹಲಿಗೆ ತಲುಪುವ ಸಾಧ್ಯತೆ ಇದೆ. ಕೃಷಿ ಕಾನೂನನ್ನ ವಿರೋಧಿಸಿ ರೈತರು ಐತಿಹಾಸಿಕ ಆಂದೋಲವನ್ನ ನಡೆಸುತ್ತಿದ್ದಾರೆ. ಹೀಗಾಗಿ ಇಂತಹ ಸಂದರ್ಭದಲ್ಲಿ ನಮ್ಮ ಒಗ್ಗಟ್ಟನ್ನ ತೋರಿಸೋದು ಅನಿವಾರ್ಯವಾಗಿದೆ. ಪ್ರತಿಭಟನಾನಿರತರೊಂದಿಗೆ ನಾವಿದ್ದೇವೆ ಎಂದು ತೋರಿಸಲು ಈ ಕೆಲಸ ಮಾಡಿದ್ದೇವೆ ಅಂತಾ ತೊಟ್ಟುಮರಿಲ್ ಹೇಳಿದ್ರು.