alex Certify ಪಾಲಕ್ಕಾಡ್‌ ಪಾಲಿಕೆ ಕಟ್ಟಡದ ಮೇಲೆ ’ಜೈ ಶ್ರೀರಾಮ್’ ಘೋಷ ವಾಕ್ಯ: ನೆಟ್ಟಿಗರ ವಲಯದಲ್ಲಿ ಬಿಸಿ ಬಿಸಿ ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಲಕ್ಕಾಡ್‌ ಪಾಲಿಕೆ ಕಟ್ಟಡದ ಮೇಲೆ ’ಜೈ ಶ್ರೀರಾಮ್’ ಘೋಷ ವಾಕ್ಯ: ನೆಟ್ಟಿಗರ ವಲಯದಲ್ಲಿ ಬಿಸಿ ಬಿಸಿ ಚರ್ಚೆ

ಕೇರಳದ ಪಾಲಕ್ಕಾಡ್‌ನ ಪುರಸಭೆ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಹಾಕಿ, ’ಜೈ ಶ್ರೀರಾಮ್‌’ ಘೋಷವನ್ನು ಹಾಕಿರುವುದು ಎಲ್ಲೆಡೆ ಭಾರೀ ಪ್ರತಿಕ್ರಿಯೆಗೆ ಕಾರಣವಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಾಲಕ್ಕಾಡ್‌ ಪಾಲಿಕೆಯ ವ್ಯಾಪ್ತಿಯಲ್ಲಿ ಬಹುಮತ ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾದ ಬಳಿಕ ಈ ಘಟನೆ ಜರುಗಿದೆ. ಚುನಾವಣೆ ಫಲಿತಾಂಶಗಳ ಬಳಿಕ ಪಾಲಕ್ಕಾಡ್ ‌ಅನ್ನು ’ಕೇರಳದ ಗುಜರಾತ್‌’ ಎಂದು ಬಿಜೆಪಿ ವಕ್ತಾರ ವರ್ಣಿಸಿದ್ದಾರೆ.

ಸಾರ್ವಜನಿಕ ಕಾರ್ಯಾಲಯದ ಮೇಲೆ ಈ ರೀತಿ ಪೋಸ್ಟರ್‌ ಹಾಕಿರುವ ವಿಚಾರವೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇರಳದ ಅನೇಕ ನೆಟ್ಟಿಗರು ಈ ಬಗ್ಗೆ ಬಿಸಿ ಬಿಸಿ ಚರ್ಚೆಗೆ ಮುಂದಾಗಿದ್ದು, ಜಾತ್ಯಾತೀತ ವ್ಯವಸ್ಥೆಯಲ್ಲಿ, ಸಾರ್ವಜನಿಕ ಕಾರ್ಯಾಲಯದ ಮೇಲೆ ಧಾರ್ಮಿಕ ಪ್ರಚಾರ ಹೇಗೆ ನಡೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...