ಕೇರಳದ ಪಾಲಕ್ಕಾಡ್‌ನ ಪುರಸಭೆ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಹಾಕಿ, ’ಜೈ ಶ್ರೀರಾಮ್’ ಘೋಷವನ್ನು ಹಾಕಿರುವುದು ಎಲ್ಲೆಡೆ ಭಾರೀ ಪ್ರತಿಕ್ರಿಯೆಗೆ ಕಾರಣವಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಾಲಕ್ಕಾಡ್ ಪಾಲಿಕೆಯ ವ್ಯಾಪ್ತಿಯಲ್ಲಿ ಬಹುಮತ ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾದ ಬಳಿಕ ಈ ಘಟನೆ ಜರುಗಿದೆ. ಚುನಾವಣೆ ಫಲಿತಾಂಶಗಳ ಬಳಿಕ ಪಾಲಕ್ಕಾಡ್ ಅನ್ನು ’ಕೇರಳದ ಗುಜರಾತ್’ ಎಂದು ಬಿಜೆಪಿ ವಕ್ತಾರ ವರ್ಣಿಸಿದ್ದಾರೆ.
ಸಾರ್ವಜನಿಕ ಕಾರ್ಯಾಲಯದ ಮೇಲೆ ಈ ರೀತಿ ಪೋಸ್ಟರ್ ಹಾಕಿರುವ ವಿಚಾರವೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇರಳದ ಅನೇಕ ನೆಟ್ಟಿಗರು ಈ ಬಗ್ಗೆ ಬಿಸಿ ಬಿಸಿ ಚರ್ಚೆಗೆ ಮುಂದಾಗಿದ್ದು, ಜಾತ್ಯಾತೀತ ವ್ಯವಸ್ಥೆಯಲ್ಲಿ, ಸಾರ್ವಜನಿಕ ಕಾರ್ಯಾಲಯದ ಮೇಲೆ ಧಾರ್ಮಿಕ ಪ್ರಚಾರ ಹೇಗೆ ನಡೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.