alex Certify ಮದುವೆ ನೆಪದಲ್ಲಿ ಆಟೋ ಡ್ರೈವರ್ ನಿಂದ ಲೈಂಗಿಕ ದೌರ್ಜನ್ಯ: ದುಡುಕಿದ ಹುಡುಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ನೆಪದಲ್ಲಿ ಆಟೋ ಡ್ರೈವರ್ ನಿಂದ ಲೈಂಗಿಕ ದೌರ್ಜನ್ಯ: ದುಡುಕಿದ ಹುಡುಗಿ

ತಿರುವನಂತಪುರಂ: ಕೇರಳದಲ್ಲಿ ಆಟೋ ಡ್ರೈವರ್ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಬೆಂಕಿ ಹಚ್ಚಿಕೊಂಡ 17 ವರ್ಷದ ಹುಡುಗಿ ಮೃತಪಟ್ಟಿದ್ದಾಳೆ.

ಡೆಮಾಕ್ರಟಿಕ್ ಯೂತ್ ಫೆಡರೇಷನ್ ಅಫ್ ಇಂಡಿಯಾ ಸದಸ್ಯನೂ ಆಗಿರುವ ಮನು ಮನೋಜ್ ಇಂತಹ ಕೃತ್ಯ ಎಸಗಿದ ಆರೋಪಿ ಎಂದು ಹೇಳಲಾಗಿದೆ. ಇಡುಕ್ಕಿ ಜಿಲ್ಲೆಯ ಹದಿಹರೆಯದ ಹುಡುಗಿಯನ್ನು ಮದುವೆಯಾಗುವ ಭರವಸೆ ನೀಡಿದ್ದ ಆರೋಪಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆ ಬೆಳಕಿಗೆ ಬಂದ ನಂತರ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾದಿಂದ ಮನೋಜ್ ನನ್ನು ಹೊರ ಹಾಕಲಾಗಿದೆ.

ಅಕ್ಟೋಬರ್ 24 ರಂದು ಹುಡುಗಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಶೇಕಡ 60ರಷ್ಟು ಸುಟ್ಟ ಗಾಯಗಳಾಗಿದ್ದ ಆಕೆಯನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ನಂತರ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು ಅಕ್ಟೋಬರ್ 31 ರ ಶನಿವಾರ ಮೃತಪಟ್ಟಿದ್ದಾರೆ. ಬಾಲಕಿಯ ಪೋಷಕರು ಆರೋಪಿಗಳ ವಿರುದ್ಧ ದೂರು ನೀಡಿದಾಗ ಅವರಿಗೆ ಬೆದರಿಕೆ ಹಾಕಲಾಗಿದೆ. ದೂರು ಹಿಂಪಡೆಯಲು ಒತ್ತಡ ಹೇರಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...