alex Certify ವ್ಯಂಗ್ಯ ಮಾಡಲು ಹೋಗಿ ವಿವಾದಕ್ಕೀಡಾದ ವಕೀಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಂಗ್ಯ ಮಾಡಲು ಹೋಗಿ ವಿವಾದಕ್ಕೀಡಾದ ವಕೀಲೆ

Kathua Lawyer's Home Mobbed after 'Controversial' Rape Cartoon on Navratri: All You Need to Know

2018ರಲ್ಲಿ ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಪರ ವಾದ ಮಂಡಿಸಿ ಸುದ್ದಿಯಾಗಿದ್ದ ವಕೀಲೆ ದೀಪಿಕಾ ಸಿಂಗ್​ ರಾಜಾವತ್​ ಹೊಸ ವಿವಾದವೊಂದನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ. ನವರಾತ್ರಿ ಹಬ್ಬವನ್ನ ಅತ್ಯಾಚಾರ ಪ್ರಕರಣಕ್ಕೆ ಹೋಲಿಸುವ ಟ್ವೀಟ್​ ಒಂದನ್ನ ಶೇರ್​ ಮಾಡೋಕೆ ಹೋದ ವಕೀಲೆ ಇದೀಗ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಕ್ಟೋಬರ್​ 19ರಂದು ವಕೀಲೆ ದೀಪಿಕಾ ಸಿಂಗ್​ ರಾಜಾವತ್​ ಟ್ವಿಟರ್​ನಲ್ಲಿ ನವರಾತ್ರಿ ಹಬ್ಬಕ್ಕೆ ಸಂಬಂಧಿಸಿದ ಕಾರ್ಟೂನ್​ ಒಂದನ್ನ ಶೇರ್​ ಮಾಡಿದ್ರು. ಎರಡು ಚಿತ್ರಗಳಿದ್ದ ಈ ಕಾರ್ಟೂನ್​ನಲ್ಲಿ ಒಂದು ಕಡೆ ಪುರುಷ ದೇವಿಯ ಕಾಲಿಗೆ ನಮಸ್ಕರಿಸ್ತಾ ಇದ್ರೆ, ಇನ್ನೊಂದು ಕಡೆ ಮಹಿಳೆ ಅತ್ಯಾಚಾರ ಮಾಡಲು ಯತ್ನಿಸುತ್ತಿರುವ ರೀತಿಯಲ್ಲಿ ವ್ಯಂಗ್ಯಚಿತ್ರ ಬಿಡಿಸಲಾಗಿತ್ತು.

ಇಂತಹದ್ದೊಂದು ಫೋಟೋವನ್ನ ವಕೀಲೆ ಪೋಸ್ಟ್ ಮಾಡಿದ್ದನ್ನ ಕಂಡ ಹಿಂದೂಗಳು ಕೆಂಡಾಮಂಡಲರಾಗಿದ್ರು. ಹಿಂದೂ ಹಬ್ಬಗಳನ್ನ ಈ ರೀತಿ ಸಾಮಾಜಿಕ ಪಿಡುಗುಗಳಿಗೆ ಯಾಕೆ ಹೋಲಿಕೆ ಮಾಡ್ತೀರಾ ಅಂತಾ ಟ್ವೀಟ್​ನಲ್ಲಿ ಪ್ರಶ್ನೆಗಳ ಸುರಿಮಳೆಗೈಯಲಾಗಿತ್ತು. ಬಳಿಕ ಟ್ವಿಟರ್​ನಲ್ಲಿ ಅರೆಸ್ಟ್ ದೀಪಿಕಾ ರಾಜಾವತ್​ ಎಂಬ ಅಭಿಯಾನವನ್ನೂ ಆರಂಭಿಸಲಾಗಿತ್ತು. ಮಾತ್ರವಲ್ಲದೇ ಅನೇಕ ಹಿಂದೂಪರ ಸಂಘಟನೆಗಳು ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ ಅಂತಾಲೂ ಸ್ವತಃ ದೀಪಿಕಾ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ರು.

2018ರಲ್ಲಿ ಕತುವಾದಲ್ಲಿ 8 ವರ್ಷದ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನ ಕೈಗೆತ್ತಿಕೊಳ್ಳುವ ಮೂಲಕ ದೀಪಿಕಾ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ದೀಪಿಕಾ ರಾಷ್ಟ್ರ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಗಳಿಸಿದ ವಕೀಲೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...