alex Certify ಸುಮ್ಮನಿರಲಾರದ ವೃದ್ದ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಮ್ಮನಿರಲಾರದ ವೃದ್ದ ಮಾಡಿದ್ದೇನು ಗೊತ್ತಾ….?

Karma? Bull Attacks Old Man after He Beats It with a Stick in Viral Video

ಊರ ಉಸಾಬರಿ ನಮಗ್ಯಾಕೆ ಬೇಕು ಅಂತಾ ಹಿರಿಯರು ಹೇಳೋ ಮಾತನ್ನ ನೀವ್​ ಕೇಳಿರ್ತೀರಿ. ಆದರೆ ಈ ವಿಡಿಯೋ ನೋಡಿದ ಮೇಲೆ ನೀವು ದಾರಿ ಮೇಲೆ ಹೋಗೋ ಹೋರಿ ಉಸಾಬರಿ ನಮಗ್ಯಾಕೆ ಬೇಕ್ರಿ ಅಂತಾ ಹೇಳೋದು ಕನ್ಫರ್ಮ್​. ಯಾಕಂದ್ರೆ ಸುಮ್ಮನೇ ನಿಂತಿದ್ದ ಹೋರಿಗೆ ಬೆತ್ತದಿಂದ ಹೊಡೆಯೋಕೆ ಹೋದ ಅಜ್ಜ ಇದೀಗ ಆಸ್ಪತ್ರೆ ಸೇರಿದ್ದಾನೆ.

ರಸ್ತೆಯಲ್ಲಿ ಹೋರಿಯೊಂದು ತನ್ನ ಪಾಡಿಗೆ ತಾನು ನಿಂತಿರುತ್ತೆ. ಆದರೆ ಆ ಹೋರಿಯ ಸಮೀಪದಲ್ಲೇ ಸಾಗಿದ ಆ ವೃದ್ಧನಿಗೆ ಅದೇನು ಅನ್ನಿಸ್ತೋ ಗೊತ್ತಿಲ್ಲ. ಇದಕ್ಕಿದ್ದಂತೆ ಕೋಲಿನಿಂದ ಆ ಹೋರಿಗೆ ಬಾರಿಸೋಕೆ ಶುರು ಮಾಡಿದ್ದಾನೆ. ಎರಡೇಟು ತಿನ್ನೋವರೆಗೂ ಸುಮ್ಮನಿದ್ದ ಹೋರಿ. ಮೂರನೇ ಏಟಿಗೆ ವೃದ್ಧ ಕೋಲು ಎತ್ತಾ ಇದ್ದಂತೆಯೇ ತನ್ನ ಕೊಂಬಿನಿಂದ ಅಜ್ಜನನ್ನ ಎತ್ತಿ ಬಿಸಾಡಿದೆ.

ಈ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಟ್ವಿಟರ್​ನಲ್ಲಿ ಭಾರೀ ಸದ್ದು ಮಾಡ್ತಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನ ವೀಕ್ಷಿಸಿದ್ದಾರೆ. ಹೋರಿಯ ಕೆಲಸವನ್ನ ಹೊಗಳಿರೋ ಟ್ವೀಟಿಗರು ಕರ್ಮದ ಫಲ ಅಂತಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...