
ಊರ ಉಸಾಬರಿ ನಮಗ್ಯಾಕೆ ಬೇಕು ಅಂತಾ ಹಿರಿಯರು ಹೇಳೋ ಮಾತನ್ನ ನೀವ್ ಕೇಳಿರ್ತೀರಿ. ಆದರೆ ಈ ವಿಡಿಯೋ ನೋಡಿದ ಮೇಲೆ ನೀವು ದಾರಿ ಮೇಲೆ ಹೋಗೋ ಹೋರಿ ಉಸಾಬರಿ ನಮಗ್ಯಾಕೆ ಬೇಕ್ರಿ ಅಂತಾ ಹೇಳೋದು ಕನ್ಫರ್ಮ್. ಯಾಕಂದ್ರೆ ಸುಮ್ಮನೇ ನಿಂತಿದ್ದ ಹೋರಿಗೆ ಬೆತ್ತದಿಂದ ಹೊಡೆಯೋಕೆ ಹೋದ ಅಜ್ಜ ಇದೀಗ ಆಸ್ಪತ್ರೆ ಸೇರಿದ್ದಾನೆ.
ರಸ್ತೆಯಲ್ಲಿ ಹೋರಿಯೊಂದು ತನ್ನ ಪಾಡಿಗೆ ತಾನು ನಿಂತಿರುತ್ತೆ. ಆದರೆ ಆ ಹೋರಿಯ ಸಮೀಪದಲ್ಲೇ ಸಾಗಿದ ಆ ವೃದ್ಧನಿಗೆ ಅದೇನು ಅನ್ನಿಸ್ತೋ ಗೊತ್ತಿಲ್ಲ. ಇದಕ್ಕಿದ್ದಂತೆ ಕೋಲಿನಿಂದ ಆ ಹೋರಿಗೆ ಬಾರಿಸೋಕೆ ಶುರು ಮಾಡಿದ್ದಾನೆ. ಎರಡೇಟು ತಿನ್ನೋವರೆಗೂ ಸುಮ್ಮನಿದ್ದ ಹೋರಿ. ಮೂರನೇ ಏಟಿಗೆ ವೃದ್ಧ ಕೋಲು ಎತ್ತಾ ಇದ್ದಂತೆಯೇ ತನ್ನ ಕೊಂಬಿನಿಂದ ಅಜ್ಜನನ್ನ ಎತ್ತಿ ಬಿಸಾಡಿದೆ.
ಈ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಟ್ವಿಟರ್ನಲ್ಲಿ ಭಾರೀ ಸದ್ದು ಮಾಡ್ತಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನ ವೀಕ್ಷಿಸಿದ್ದಾರೆ. ಹೋರಿಯ ಕೆಲಸವನ್ನ ಹೊಗಳಿರೋ ಟ್ವೀಟಿಗರು ಕರ್ಮದ ಫಲ ಅಂತಾ ಬರೆದುಕೊಂಡಿದ್ದಾರೆ.